Welcome To Kannada News Today

ನಿರೀಕ್ಷೆಯ ವಸ್ತುಗಳು ಸಿಗದ ಕಾರಣ, ಆಕ್ರೋಶದಿಂದ ಪತ್ರ ಬರೆದ ಕಳ್ಳ

ಕಳ್ಳನೊಬ್ಬ ಉನ್ನತ ಅಧಿಕಾರಿಯ ನಿವಾಸಕ್ಕೆ ನುಗ್ಗಿ, ಅವನಿಗೆ ನಿರೀಕ್ಷಿತ ಪ್ರಮಾಣದ ನಗದು ಮತ್ತು ಆಭರಣಗಳು ಸಿಗಲಿಲ್ಲ ಎಂದು ನಿರಾಶೆಗೊಂಡು ಆಕ್ರೋಶದಿಂದ ಪತ್ರ ಬರೆದು ಹೋಗಿದ್ದಾನೆ.

🌐 Kannada News :

ಸರ್ಕಾರಿ ಅಧಿಕಾರಿಯೊಬ್ಬರ ಮನೆಗೆ ನುಗ್ಗಿ ಕಳ್ಳನೊಬ್ಬ ಬರೆದಿಟ್ಟು ಹೋದ ಪತ್ರ ಈಗ ಸುದ್ದಿಯಾಗಿದೆ. ಮನೆಯಲ್ಲಿ ತನ್ನ ನಿರೀಕ್ಷೆಯ ವಸ್ತುಗಳು ಸಿಗದ ಕಾರಣ ಆತ ಒಂದು ಆಸಕ್ತಿಕರ ಪತ್ರ ಬರೆದು ಹೋಗಿದ್ದಾನೆ.

“ನಿಮ್ಮ ಮನೆಯಲ್ಲಿ ಹಣವಿಲ್ಲದಿದ್ದಾಗ .. ಅದನ್ನು ಲಾಕ್ ಮಾಡುವ ಅಗತ್ಯವೇನು” ಎಂದು ಆತ ಹಿಂದಿಯಲ್ಲಿ ಬರೆದಿದ್ದಾನೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಬಳಿಯ ದೇವಾಸ್ ನಲ್ಲಿ ಈ ಘಟನೆ ನಡೆದಿದೆ.

ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ, ಎಸ್ಪಿ ನಿವಾಸದ ಬಳಿಯ ಡೆಪ್ಯುಟಿ ಕಲೆಕ್ಟರ್ ತ್ರಿಲೋಚನ ಗೌರ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಖಟೇಗಾಂವ್ SDM ಆಗಿ ಸೇವೆ ಸಲ್ಲಿಸುತ್ತಿರುವ ತ್ರಿಲೋಚನ ಗೌರ್ ಕಳೆದ 15-20 ದಿನಗಳಿಂದ ಮನೆಯಲ್ಲಿ ಇರಲಿಲ್ಲ.

ಅವರು ಎರಡು ದಿನಗಳ ಹಿಂದೆ ವಾಪಾಸ್ಸಾದಾಗ ನಿವಾಸದಲ್ಲಿ ಕಳ್ಳತನ ಆಗಿರುವ ಬಗ್ಗೆ ತಿಳಿದಿದೆ. ಮನೆಯಲ್ಲಿ ವಸ್ತುಗಳು ಚೆಲ್ಲಾಡಿದ್ದವು, ಕೆಲವು ನಗದು ಮತ್ತು ಬೆಳ್ಳಿ ಆಭರಣಗಳು ಕಂಡುಬಂದಿಲ್ಲ. ನಂತರ ಅವರು ಪೊಲೀಸರಿಗೆ ದೂರು ನೀಡಿದರು.

“ತ್ರಿಲೋಚನ ಗೌರ್ ತಂಗಿದ್ದ ಸರ್ಕಾರಿ ಮನೆಯಿಂದ ರೂ. 30,000 ನಗದು ಮತ್ತು ಬೆಳ್ಳಿ ಆಭರಣಗಳು ನಾಪತ್ತೆಯಾಗಿವೆ ಎಂದು ದೂರು ಸ್ವೀಕರಿಸಲಾಗಿದೆ. ಅವರು ಪ್ರಸ್ತುತ ಖಟೇಗಾಂವ್ ಎಸ್‌ಡಿಎಮ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಯಾವಾಗ ಕಳ್ಳತನವಾಗಿದೆ ಎಂದು ತಿಳಿದಿಲ್ಲ” ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today