ತಂದೆ ಕಣ್ಣ ಮುಂದೆಯೇ ಮಗಳ ಮೇಲೆ ಚಿರತೆ ದಾಳಿ

ಮಧ್ಯಪ್ರದೇಶದಲ್ಲಿ 16 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ಗಂಟಲಿಗೆ ಕಚ್ಚಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

🌐 Kannada News :

ಸಿಯೋನಿ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ 16 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ಗಂಟಲಿಗೆ ಕಚ್ಚಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸಿಯೋನಿ ಜಿಲ್ಲೆಯ ಕನ್ಹಿವಾಡ ಅರಣ್ಯದಲ್ಲಿ ಶನಿವಾರ ಈ ಘಟನೆ ನಡೆದಿದೆ. ಬಾಲಕಿ ಹಾಗೂ ಆಕೆಯ ತಂದೆ ದನ ಮೇಯಿಸಲು ಕಾಡಿಗೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ.

ದನ ಮೇಯಿಸುತ್ತಿದ್ದ ವೇಳೆ ಹೊಂಚು ಹಾಕಿ ಕೂತಿದ್ದ ಚಿರತೆ ಬಾಲಕಿ ಮೇಲೆ ದಾಳಿ ನಡೆಸಿ ಕತ್ತಿನ ಭಾಗದಲ್ಲಿ ಕಚ್ಚಿದೆ, ಅಸಾಯಕ ತಂದೆ ತನ್ನ ಕಣ್ಣ ಮುಂದೆಯೇ ಮಗಳು ಚಿರತೆಗೆ ಬಲಿಯಾಗುತ್ತಿರುವಾಗ ಅಸಾಯಕತೆಯಿಂದ ಕಿರುಚಾಡಿ ಅದನ್ನು ಹಿಮ್ಮೆಟ್ಟಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today