ಮಹಿಳೆ ಮೇಲೆ ಚಿರತೆ ದಾಳಿ, ಸ್ಥಿತಿ ಗಂಭೀರ : ಕೊಪ್ಪಳದಲ್ಲಿ ಘಟನೆ

ಜಾನುವಾರುಗಳನ್ನು ಮೇಯಿಸಲು ಬೆಟ್ಟದ ಪ್ರದೇಶಕ್ಕೆ ತೆರಳಿದ್ದ ಮಹಿಳೆ ಚಿರತೆ ದಾಳಿಗೆ ತುತ್ತಾಗಿರುವ ಘಟನೆ ನಡೆದಿದೆ.

( Kannada News ) : ಗಂಗಾವತಿ : ಜಾನುವಾರು ಮೇಯಿಸಲು ಬೆಟ್ಟದ ಪ್ರದೇಶಕ್ಕೆ ಹೋಗಿದ್ದ ಮಹಿಳೆ ಹೊಂಚು ಹಾಕಿ ಕೂತಿದ್ದ ಚಿರತೆ ದಾಳಿಗೆ ತುತ್ತಾಗಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದ ಬಳಿ ನಡೆದಿದೆ. ಹಲವು ಘಂಟೆಯ ಯುದ್ಧದಲ್ಲಿ ಅನೇಕ ಕಡಿತಗಳನ್ನು ಅನುಭವಿಸಿರುವ ಮಹಿಳೆ ಆಸ್ಪತ್ರೆ ಪಾಲಾಗಿದ್ದಾರೆ.

ಚಿಕ್ಕರಾಂಪುರ ಗ್ರಾಮದ ಮಾಬಮ್ಮ (55) ಎಂಬುವವರೇ ಚಿರತೆ ದಾಳಿಯಿಂದ ಗಾಯಾಗೊಂಡಿರುವ ಮಹಿಳೆ, ಚಿರತೆ ದಾಳಿಯಿಂದ ಆಕೆಯ ಕತ್ತು, ಕಿವಿ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲು ಅವರನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಾಬಮ್ಮ ಮುಂಜಾನೆ ಎಂದಿನಂತೆ ಜಾನುವಾರು ಮೇಯಿಸಲು ಬೆಟ್ಟಕ್ಕೆ ತೆರಳಿದ್ದರು.

ಇವರನ್ನು ಕಂಡು ಹೊಂಚು ಹಾಕಿದ್ದ ಚಿರತೆ ಅದೇ ಸಮಯಕ್ಕೆ ಕಾಯುತ್ತಿದ್ದು ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ. ಹೇಗೋ ಎದೆಗುಂದದ ಮಹಿಳೆ ಚಿರತೆ ದಾಳಿ ಯಿಂದ ತಪ್ಪಿಸಿಕೊಂಡು ಗ್ರಾಮದ ಕಡೆ ಚೀರುತ್ತಾ ಬಂದಿದ್ದಾಳೆ.

ಮಹಿಳೆ ಮೇಲೆ ಚಿರತೆ ದಾಳಿ, ಸ್ಥಿತಿ ಗಂಭೀರ : ಕೊಪ್ಪಳದಲ್ಲಿ ಘಟನೆ - Kannada News

ಆಕೆಯನ್ನು ಕಂಡಗ್ರಾಮಸ್ಥರು ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಗಮನಕ್ಕೆ ಬರುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಪರಣ್ಣ ಮನವಳ್ಳಿ, ಗಾಯಾಳು ಮಹಿಳೆಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಅವರು ಈ ಕೂಡಲೇ ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ..

Follow us On

FaceBook Google News

Read More News Today