Crime News: ವ್ಯಕ್ತಿಯನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಥಳಿಸಿದ ವಿಡಿಯೋ ವೈರಲ್

ಮರವೊಂದಕ್ಕೆ ತಲೆಕೆಳಗಾಗಿ ನೇತಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೆಲವರು ಕೆಟ್ಟದಾಗಿ ಥಳಿಸಿದ್ದಾರೆ. 

ರಾಯ್‌ಪುರ: ಮರವೊಂದಕ್ಕೆ ತಲೆಕೆಳಗಾಗಿ ನೇತಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೆಲವರು ಕೆಟ್ಟದಾಗಿ ಥಳಿಸಿದ್ದಾರೆ. ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿಪತ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಕ್ಯುರಿಟಿ ಗಾರ್ಡ್ ಮಹಾವೀರ್ ಇತ್ತೀಚೆಗೆ ತನ್ನ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಎಂದು ಮನೀಶ್ ಎಂಬ ವ್ಯಕ್ತಿ ಆರೋಪಿಸಿದ್ದಾರೆ.

ಆತನನ್ನು ಕುಟುಂಬ ಸದಸ್ಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ಅವರು ಹೇಳಿದ್ದಾರೆ. ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ವಿಷಯ ಇತ್ಯರ್ಥಪಡಿಸುವುದಾಗಿ ತಿಳಿಸಿದ ನಂತರ ಮಹಾವೀರ್ ಅವರನ್ನು ಬಿಡುಗಡೆಗೊಳಿಸಲಾಯಿತು.

ಆದರೆ, ಮತ್ತೆ ಕಳ್ಳತನಕ್ಕೆ ಯತ್ನಿಸಿದಾಗ ಮನೀಶ್ ಹಾಗೂ ಇತರರು ಆತನನ್ನು ಹಿಡಿದು ಕೆಟ್ಟದಾಗಿ ಥಳಿಸಿದ್ದಾರೆ. ಮಹಾವೀರ್ ನ ಎರಡೂ ಕಾಲುಗಳನ್ನು ಹಗ್ಗದಿಂದ ಕಟ್ಟಿ ಮರಕ್ಕೆ ನೇತುಹಾಕಿ ಥಳಿಸಿದ್ದಾರೆ. ಕೆಲವರು ಅದನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಮತ್ತೊಂದೆಡೆ ಚಿತ್ರಹಿಂಸೆಯನ್ನು ಕಂಡ ಮಹಿಳೆಯೊಬ್ಬರು ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮರಕ್ಕೆ ನೇತು ಹಾಕಿದ್ದ ಮಹಾವೀರ್ ನನ್ನು ರಕ್ಷಿಸಿದ್ದಾರೆ. ಮನೀಶ್ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇತರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Chhattisgarh Man Hung From Tree By Legs Beaten Mercilessly

Follow Us on : Google News | Facebook | Twitter | YouTube