YouTube ನೋಡಿ ಗರ್ಭಪಾತಕ್ಕೆ ಯತ್ನ.. ಆಮೇಲೆ ಏನಾಯ್ತು..?
ಬಾಯ್ ಫ್ರೆಂಡ್ ನಿಂದಾಗಿ ಗರ್ಭಿಣಿಯಾದ ಯುವತಿಯೊಬ್ಬಳು Youtube ನಲ್ಲಿ ವೀಡಿಯೋಗಳನ್ನು ನೋಡಿ ಗರ್ಭಪಾತ ಮಾಡಿಕೊಳ್ಳಲು ಯತ್ನಿಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
ನಾಗ್ಪುರ: ಬಾಯ್ ಫ್ರೆಂಡ್ ನಿಂದಾಗಿ ಗರ್ಭಿಣಿಯಾದ ಯುವತಿಯೊಬ್ಬಳು Youtube ನಲ್ಲಿ ವೀಡಿಯೋಗಳನ್ನು ನೋಡಿ ಗರ್ಭಪಾತ ಮಾಡಿಕೊಳ್ಳಲು ಯತ್ನಿಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿಯುವತಿಯ ಪ್ರಿಯಕರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ವಿವರಕ್ಕೆ ಹೋಗುವುದಾದರೆ.. ನಾಗ್ಪುರ ನಾರ್ಖೇಡ್ ತಾಲೂಕಿನ 17 ವರ್ಷದ ಬಾಲಕಿಗೆ ಎರಡು ವರ್ಷಗಳ ಹಿಂದೆ ಅದೇ ಪ್ರದೇಶದ 27 ವರ್ಷದ ಯುವಕನ ಪರಿಚಯವಾಗಿತ್ತು.
ಇಬ್ಬರ ನಡುವೆ ಪ್ರೀತಿ ಚಿಗುರಿತು. ಕಳೆದ ವರ್ಷ ಯುವಕನಿಗೆ ನಾಗ್ಪುರದ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತ್ತು. ಈ ಕ್ರಮದಲ್ಲಿ ಆತ ಐಎಂಡಿಸಿ ಪ್ರದೇಶದ ಕೊಠಡಿಯಲ್ಲಿ ವಾಸವಾಗಿನು. ಕೆಲ ದಿನಗಳ ಹಿಂದೆ ಯುವತಿ ನಾರ್ಖೇಡ್‌ನಿಂದ ನಾಗ್ಪುರಕ್ಕೆ ತೆರಳಿ ಯುವಕನ ಕೊಠಡಿಯಲ್ಲಿ ತಂಗಿದ್ದಳು.
ಈ ವೇಳೆ ಇಬ್ಬರು ದೈಹಿಕವಾಗಿ ಹಲವು ಬಾರಿ ಸೇರಿದ್ದರು. ಕಳೆದ ಕೆಲವು ದಿನಗಳಿಂದ ಆಕೆ ವಾಕರಿಕೆ ಮತ್ತು ವಾಂತಿಯಿಂದ ಬಳಲುತ್ತಿದ್ದಳು. ಅದೇ ಸಮಯದಲ್ಲಿ ತಾನು ಗರ್ಭಿಣಿ ಎಂದು ತಿಳಿದು ಗಾಬರಿಯಾದಳು. ಕೂಡಲೇ ಗೆಳೆಯನಿಗೆ ವಿಷಯ ತಿಳಿಸಿದಾಗ ಆತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಆಕೆಗೆ ಕೆಲವು ಔಷಧಿಗಳನ್ನು ನೀಡಿದ್ದನು.
ಅದರಲ್ಲಿ ಕೆಲವನ್ನು ಯುವತಿ ತೆಗೆದುಕೊಂಡಿದ್ದಳು. ಆದರೂ .. ಯಾವುದು ಉಪಯೋಗವಾಗದೆ, ಗರ್ಭಪಾತ ಮಾಡುವುದು ಹೇಗೆಂದು ತಿಳಿಯಲು youtube ನಲ್ಲಿ ನೋಡಿ, ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಗರ್ಭಪಾತಕ್ಕೆ ಯತ್ನಿಸಿದ್ದರು. ಈ ವೇಳೆ ಗರ್ಭಪಾತದಿಂದಾಗಿ ಮಗು ನೆಲಕ್ಕೆ ಬಿದ್ದಿತ್ತು. ಬಾಲಕಿ.. ಪೋಷಕರು ಕೂಡಲೇ ಮಗುವನ್ನು ಮಗಳ ಜೊತೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ಈಗಾಗಲೇ ಶಿಶು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಬಾಲಕಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಕೆಯ ಪ್ರಿಯಕರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
Follow us On
Google News |