ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅಪ್ರಾಪ್ತ ಬಾಲಕಿ ಕೊಲೆ ಪ್ರಕರಣದ ಆರೋಪಿ !
ಅಪ್ರಾಪ್ತ ಬಾಲಕಿಯನ್ನು ಹತ್ಯೆಗೈದ ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ಗುಜರಾತ್ನ ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ನಡೆದಿದೆ.
ಅಹಮದಾಬಾದ್: ಅಪ್ರಾಪ್ತ ಬಾಲಕಿಯನ್ನು ಹತ್ಯೆಗೈದ ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ಗುಜರಾತ್ನ ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ನಡೆದಿದೆ. ಆರೋಪಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದ 27 ವರ್ಷದ ಯುವಕನಿಗೆ ಸೂರತ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಂತ್ರಸ್ತರಿಗೆ 20 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸಲಾಗಿದೆ. ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಪಿಎಸ್ ಕಲಾ ಅವರ ತೀರ್ಪಿನ ನಂತರ, ಅಪರಾಧಿ ಸುಜಿತ್ ಸಾಕೇತ್ ಕೋಪದಿಂದ ನ್ಯಾಯಾಧೀಶರತ್ತ ತನ್ನ ಚಪ್ಪಲಿಯನ್ನು ಎಸೆದನು. ಆದರೆ ನ್ಯಾಯಾಧೀಶರಿಗೆ ಅದು ತಾಗದೆ ಸಾಕ್ಷಿ ಪೆಟ್ಟಿಗೆಯ ಮೇಲೆ ಚಪ್ಪಲಿ ಬಿದ್ದಿತು.
ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿ ಆರೋಪಿಸಿದ್ದಾನೆ. ಏಪ್ರಿಲ್ 30 ರಂದು ಮಧ್ಯಪ್ರದೇಶದ ಸುಜಿತ್ ಸಾಕೇತ್ ಎಂಬಾತ ಕಾರ್ಮಿಕನ ಮಗಳಾದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಂದಿದ್ದ. ಚಾಕೊಲೇಟ್ ಆಸೆಯಿಂದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಸಿಕ್ಕಿಬೀಳುವ ಭಯದಿಂದ ಬಾಲಕಿಯನ್ನು ಸಾಕ್ಷ್ಯವಿಲ್ಲದೆ ಮಾಡಲು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದ… ಈ ವೇಳೆ ಸೂರತ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರಿಂದ ಕುಪಿತಗೊಂಡ ಆತ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ.
Follow Us on : Google News | Facebook | Twitter | YouTube