Crime News: ಸ್ನೇಹಿತರ ಜೊತೆ ಸೇರಿ ತಂಗಿಯ ಮೇಲೆ ಅತ್ಯಾಚಾರ ಎಸಗಿದ ಅಣ್ಣಾ! ಮುಂದೇನು ಮಾಡಿದ ?
ಅಸ್ಸಾಂ ರಾಜಧಾನಿ ದಿಸ್ಪುರದ ಯುವತಿಯೊಬ್ಬಳು ಇತ್ತೀಚೆಗೆ ವಿವಾಹ ಸಿದ್ಧತೆಯಲ್ಲಿದ್ದಳು... ಹುಡುಗಿಗೆ ಹುಡುಗ, ಹುಡುಗನಿಗೆ ಹುಡುಗಿ ಇಷ್ಟವಾದಂತೆ ಮದುವೆ ನಿಶ್ಚಯವಾಯಿತು.
ಅಸ್ಸಾಂ ರಾಜಧಾನಿ ದಿಸ್ಪುರದ ಯುವತಿಯೊಬ್ಬಳು ಇತ್ತೀಚೆಗೆ ವಿವಾಹ ಸಿದ್ಧತೆಯಲ್ಲಿದ್ದಳು… ಹುಡುಗಿಗೆ ಹುಡುಗ, ಹುಡುಗನಿಗೆ ಹುಡುಗಿ ಇಷ್ಟವಾದಂತೆ ಮದುವೆ ನಿಶ್ಚಯವಾಯಿತು.
ಆದರೆ ಅದೇ ಸಮಯಕ್ಕೆ ಇದ್ದಕ್ಕಿದ್ದಂತೆ ಹುಡುಗನಿಗೆ ವಾಟ್ಸಾಪ್ ನಲ್ಲಿ ಒಂದು ಫೋಟೋ ಬಂತು… ಫೋಟೋವನ್ನು ದಿಟ್ಟಿಸಿ ನೋಡಿದವನಿಗೆ ಶಾಕ್ ಕಾದಿತ್ತು, ಕಾರಣ ಅದು ಒಂದು ನಗ್ನ ಫೋಟೋ ಹಾಗೂ ಅದು ಅವನ ಹೆಂಡತಿ ಆಗಬೇಕಿರುವ ಯುವತಿ ಫೋಟೋ….
10 ನಿಮಿಷಗಳ ಹಿಂದೆ ನೋಡಿದ ವಧುವಿನ ಫೋಟೋ ನಗ್ನವಾಗಿ ಕಾಣಿಸಿಕೊಂಡಿದೆ. ಇದರೊಂದಿಗೆ ಒಮ್ಮಿಂದೊಮ್ಮೆಲೇ ಅಲ್ಲಿ ಎಲ್ಲರಿಗೂ ಶಾಕ್ ಆಯಿತು. ಫೋಟೋ ನೋಡಿದ ವಧು ಕೂಡ ಬೇಸರಗೊಂಡು ಕಣ್ಣೀರಿಟ್ಟಳು. ಪೋಷಕರು ಆ ಫೋಟೋ ಬಗ್ಗೆ ಏನಾಯಿತು ಎಂದು ಕೇಳಿದಾಗ, ಅವಳು ಹಿಂದೆ ಮಾಡಿದ ಘಟನೆ ವಿವರಿಸಿದಳು.
ಒಂದು ದಿನ ಕಾಲೇಜ್ ಸಮಯದಲ್ಲಿ ಕಾಲೇಜ್ ನಿಂದ ಮನೆಗೆ ಬರುತ್ತಿದ್ದಾಗ ರಸ್ತೆ ಮಾರ್ಗ ಅವರ ಸಹೋದರ (ಕಸಿನ್) ಮತ್ತು ಗೆಳೆಯರು ಕಾರಿನಲ್ಲಿ ಬಂದು ಮನೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಕಾರು ಹತ್ತಿಸಿಕೊಂಡರು.
ಬಳಿಕ ಆಕೆಗೆ ಕೂಲ್ ಡ್ರಿಂಕ್ ನಲ್ಲಿ ಮತ್ತು ಬರುವ ಮದ್ದು ನೀಡಿ ಅತ್ಯಾಚಾರ ಎಸಗಿದರು ಎಂದು ವಿವರಿಸಿದ್ದಾಳೆ. ನಗ್ನ ಫೋಟೋಗಳನ್ನು ಸಹ ತೆಗೆದು ಮದುವೆಯಾಗುವುದನ್ನು ತಡೆಯಲು ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ…. ಎಂದು ನಡೆದ ಘಟನೆ ವಿವರಿಸಿದಳು.
ನಿಜ ವಿಷಯ ತಿಳಿದ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow us On
Google News |