ಕೋಟ್ಯಾಧಿಪತಿ ಪತ್ನಿ .. ಆಟೋ ಚಾಲಕನೊಂದಿಗೆ ಪರಾರಿ

ಅವಳು ಕೋಟ್ಯಾಧಿಪತಿಯ ಹೆಂಡತಿ, ಬುದ್ದಿಗೆ ಅದೇನು ಬಡಿದಿತ್ತೋ ಗೊತ್ತಿಲ್ಲ.. ಆಟೋ ಡ್ರೈವರ್ ಜೊತೆ ಪರಾರಿಯಾಗಿದ್ದಾಳೆ. ಇಂದೋರ್‌ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿದ್ದ 47 ಲಕ್ಷ ನಗದು ಸಮೇತ ಪತ್ನಿ ಕಾಣೆಯಾಗಿದ್ದಾರೆ

ಅವಳು ಕೋಟ್ಯಾಧಿಪತಿಯ ಹೆಂಡತಿ, ಬುದ್ದಿಗೆ ಅದೇನು ಬಡಿದಿತ್ತೋ ಗೊತ್ತಿಲ್ಲ.. ಆಟೋ ಡ್ರೈವರ್ ಜೊತೆ ಪರಾರಿಯಾಗಿದ್ದಾಳೆ. ಇಂದೋರ್‌ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿದ್ದ 47 ಲಕ್ಷ ನಗದು ಸಮೇತ ಪತ್ನಿ ಕಾಣೆಯಾಗಿದ್ದಾರೆ ಎಂದು ಪತಿ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.

ಈ ತಿಂಗಳ 13ರಿಂದ ಆಕೆ ಕಾಣುತ್ತಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಂದೋರ್ ಪೊಲೀಸರು ಮಹಿಳೆಯ ಹುಡುಕಾಟದಲ್ಲಿದ್ದಾರೆ.. ಆ ಆಟೋ ರಿಕ್ಷಾ ಚಾಲಕನಿಗಾಗಿ ಹುಡುಕಾಟ ನಡೆದಿದೆ. ಈ ಹಿಂದೆ ಯುವಕನ ಆಟೋ ರಿಕ್ಷಾದಲ್ಲಿ ಆಕೆ ಆಗಾಗ್ಗೆ ಹೊರಗೆ ಹೋಗುತ್ತಿದ್ದಳು ಎಂದು ತಿಳಿದುಬಂದಿದೆ. ಖಾಂಡ್ವಾ, ಎ ಜವ್ರಾ, ಉಜ್ಜಯಿನಿ, ರತ್ಲಾಂ ಮತ್ತು ಇತರ ಸ್ಥಳಗಳಲ್ಲಿ ಅವರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.

ಯುವಕನ ಹೆಸರು ಇಮ್ರಾನ್ ಆಗಿದ್ದು, ಆತನಿಗೆ 32 ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಇಮ್ರಾನ್ ಸ್ನೇಹಿತನ ಮನೆಯಲ್ಲಿ ಪೊಲೀಸರು 33 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.. ಆದರೆ ಮಹಿಳೆ ಹಾಗೂ ಆಟೋ ಚಾಲಕ ಇಮ್ರಾನ್ ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಆ ಮಹಿಳೆಯ ಪತಿಯ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಜಮೀನುಗಳಿವೆ ಎಂದು ವರದಿಯಾಗಿದೆ.

Stay updated with us for all News in Kannada at Facebook | Twitter
Scroll Down To More News Today