ಸೈಬರ್ ಕ್ರೈಮ್: 100 ರೂ ರೀಚಾರ್ಜ್ ಮಾಡಲು ಹೇಳಿ.. 11 ಲಕ್ಷ ಎಗರಿಸಿದ ಖದೀಮರು

ಸೈಬರ್ ಕ್ರೈಮ್ ಬಗ್ಗೆ ಎಷ್ಟು ಸುದ್ದಿಗಳು ಬಂದರೂ ಸೈಬರ್ ಅಪರಾಧಕ್ಕೆ ಬಲಿಯಾಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ, ನಾನಾರೀತಿ ಬಲೇ ಬೀಸುವ ಸೈಬರ್ ಕ್ರೈಂ ನಿಂದ ಜನ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುತ್ತಾರೆ, ಅಂತಹದ್ದೇ ಪ್ರಕರಣದಲ್ಲಿ ವೃದ್ಧನೊಬ್ಬ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ

🌐 Kannada News :

100 ರೂ.ನೊಂದಿಗೆ ರೀಚಾರ್ಜ್ ಮಾಡೋಕೆ ಹೇಳಿ ಹನ್ನೊಂದು ಲಕ್ಷ ಲಪಟಾಯಿಸಿದ್ದಾರೆ ಎಂದು ಆರೋಪಿಸಿ ವೃದ್ಧರೊಬ್ಬರು ಹೈದರಾಬಾದ್ ಸೈಬರ್ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.

ನಗರದ ವೃದ್ಧ (70) ಎಂಬುವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ನೆಟ್‌ವರ್ಕ್ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಹೇಳಿದ್ದಾನೆ. ಇನ್ನು ಕೆಲವೇ ಗಂಟೆಗಳಲ್ಲಿ ನಿಮ್ಮ ಸಿಮ್ ಕಾರ್ಡ್ ಸೇವೆಗಳು ರದ್ದಾಗುತ್ತವೆ. ಕೂಡಲೇ 100 ರೂಪಾಯಿಯೊಂದಿಗೆ ರೀಚಾರ್ಜ್ ಮಾಡಿ ಎಂದು ಸಲಹೆ ನೀಡಿದ್ದಾನೆ. ಅವನ ಮಾತುಗಳನ್ನು ಕೇಳಿದ ವೃದ್ಧ ಆ ಕ್ಷಣವೇ ರಿಚಾರ್ಜ್ ಮಾಡಿಸಲು ಮುಂದಾಗಿದ್ದಾನೆ.

ರೀಚಾರ್ಚ್ ಮಾಡಲು ನಿಮ್ಮ ಮಾಹಿತಿ ನೋಂದಾಯಿಸಬೇಕು, ವಿವರಗಳನ್ನು ಸೇರಿಸಲು ಲಿಂಕ್ ಕಳುಹಿಸುತ್ತೇವೆ ಎಂದು ಪುಸಲಾಯಿಸಿದ್ದಾನೆ. ಕೊನೆಗೆ ಅರಿಯದ ವೃದ್ಧ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾನೆ, ಅಷ್ಟೇ ನಂತರ ನೆಟ್ ಬ್ಯಾಂಕಿಂಗ್ ಮೂಲಕ ವೃದ್ಧನ ಖಾತೆಯಿಂದ ಕಂತುಗಳಲ್ಲಿ 11 ಲಕ್ಷ ರೂ. ಮಾಯವಾಗಿದೆ. ಅಸಹಾಯಕ ಸ್ಥಿತಿಯಲ್ಲಿ ವೃದ್ಧ ಪೊಲೀಸರ ಮೊರೆ ಹೋಗಿದ್ದಾರೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today