ಹೊಸಕೋಟೆ : ವರದಕ್ಷಿಣೆ ಕಿರುಕುಳ, ಮಗಳ ಕೊಲೆ ಶಂಕೆ, ಪತಿ ಮನೆ ಎದುರೇ ಅಂತ್ಯಸಂಸ್ಕಾರ

ಹೊಸಕೋಟೆ ತಾಲೂಕಿನ ನಡವತ್ತಿ ಗ್ರಾಮದಲ್ಲಿ ಈ ಘಟನೆ, ಪತಿ ಮನೆ ಎದುರೇ ಅಂತ್ಯಸಂಸ್ಕಾರ

ಬೆಂಗಳೂರು – ಹೊಸಕೋಟೆ : ರೈಲ್ವೆ ಹಳಿ ಮೇಲೆ ನವ ವಿವಾಹಿತೆ ಶವ ಪತ್ತೆಯಾಗಿದ್ದು, ಗಂಡನ ಮೇಲೆ ಕೊಲೆ ಶಂಕೆ ಮೂಡಿದೆ. ಗಂಡನ ಮನೆಯವರು ಆಕೆಯನ್ನು ವರದಕ್ಷಿಣೆಗಾಗಿ ಕಿರುಕುಳ ನೀಡಿ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಯುವತಿ ಕುಟಂಬಸ್ಥರು ಆರೋಪಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಯುವತಿಯ ಕುಟುಂಬಸ್ಥರು ಯುವತಿಯ ಗಂಡನ ಮನೆ ಎದುರೇ ಮೃತಳ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಹೊಸಕೋಟೆ ತಾಲೂಕಿನ ನಡವತ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭಾವನಾ(19) ಎಂಬಾಕೆಯೇ ಮೃತ ನವವಿವಾಹಿತೆ. ಗ್ರಾಮದ ನಿವಾಸಿ ಗಜೇಂದ್ರ ಎಂಬಾತ ಭಾವನಾರನ್ನು ಕಳೆದ ಫೆಬ್ರವರಿಯಲ್ಲಿ ವಿವಾಹವಾಗಿದ್ದರು, ಆದರೆ ಕಳೆದ ಭಾನುವಾರ ನಡವತ್ತಿ ರೈಲ್ವೆ ಹಳಿಯ ಮೇಲೆ ಭಾವನಾ ಶವ ಪತ್ತೆಯಾಗಿತ್ತು.

ಗಂಡ ಗಜೇಂದ್ರ ಮತ್ತು ಅವನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಂದಿರಬಹುದೆಂದು ಆರೋಪಿಸಿರುವ ಭಾವನಾ ಕುಟುಂಬದವರು ಆಕೆಯ ಅಂತ್ಯಕ್ರಿಯೆಯನ್ನು ಪತಿ ಗಜೇಂದ್ರನ ಮನೆ ಮುಂದೆಯೇ ನೆರವೇರಿಸಿದ್ದಾರೆ.

ಹೊಸಕೋಟೆ : ವರದಕ್ಷಿಣೆ ಕಿರುಕುಳ, ಮಗಳ ಕೊಲೆ ಶಂಕೆ, ಪತಿ ಮನೆ ಎದುರೇ ಅಂತ್ಯಸಂಸ್ಕಾರ - Kannada News

 

Follow us On

FaceBook Google News

Read More News Today