ದಾವಣಗೆರೆ ರೌಡಿಶೀಟರ್ ಬುಳ್ ನಾಗ ಮರ್ಡರ್

Davanagere Rowdy sheeter Bulla Naga Murder

ದಾವಣಗೆರೆ ರೌಡಿಶೀಟರ್ ಬುಳ್ ನಾಗ ಮರ್ಡರ್

ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದ ದಾವಣಗೆರೆಯ ರೌಡಿಶೀಟರ್ ಬುಳ್ ನಾಗನನ್ನು ಅಪರಿಚಿತರು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ. ಎಸ್.ಒ.ಜಿ ಕಾಲೋನಿಯ ಎಸ್.ಎಸ್ ಆಸ್ಪತ್ರೆ ಬಳಿ ಈ ಒಂದು ಘಟನೆ ನಡೆದಿದ್ದು, ಎಕಾ ಏಕಿ ಅಟ್ಯಾಕ್ ಮಾಡಿದ ಗುಂಪೊಂದು ರೌಡಿಶೀಟರ್ ನಾಗನನ್ನು ಕೊಂದು ಪರಾರಿಯಾಗಿದೆ.

ಮೂರು ಬಾರಿ ಬಚಾವ್ ಆಗಿದ್ದ ಬುಳ್ ನಾಗ

ಬುಳ್ ನಾಗನ ಮೇಲೆ ನಡೆದ ದಾಳಿ ಇದೇ ಮೊದಲೇನಲ್ಲ, ಇದೇ ರೀತಿ ಮೂರು ಬಾರಿ ನಡೆದಿದ್ದ ದಾಳಿಯಲ್ಲಿ ನಾಗನ ಅದೃಷ್ಟ ಚೆನ್ನಾಗಿದ್ದು ಬಚಾವ್ ಆಗಿದ್ದ, ಆದರೆ ಈ ಬಾರಿ ಜಳಕಿಸಿದ ಮಾರಾಕಾಸ್ತ್ರಗಳು ನಾಗನನ್ನು ಬಲಿ ತೆಗೆದುಕೊಂಡಿವೆ. ಘಟನೆ ನಡೆದ ತಕ್ಷಣ ನಾಗನ ಜೊತೆ ಇದ್ದವರು ಆಸ್ಪತ್ರೆಗೆ ಕರೆತಂದರಾದರೂ ಅತಿಯಾದ ರಕ್ತಸ್ರಾವದಿಂದ ಬುಳ್ ನಾಗ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಶ್ರೀರಾಮನಗರ ವಾಸಿ ಮೃತ ರೌಡಿಶೀಟರ್ ಬುಳ್ ನಾಗ, ಕೊಲೆ, ಬೆದರಿಕೆ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಇನ್ನು ಘಟನಾ ಸ್ಥಳಕ್ಕೆ ಎಸ್.ಪಿ.ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಧ್ಯ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಚುರುಕುಗೊಳಿಸಿದ್ದಾರೆ.

ದಾವಣಗೆರೆ ರೌಡಿಶೀಟರ್ ಬುಳ್ ನಾಗ ಮರ್ಡರ್ - Kannada News

ಪೊಲೀಸರು ಸಧ್ಯ ಕೊಲೆಗಾರರ ಮಾಹಿತಿ ಕಲೆಹಾಕುತ್ತಿದ್ದು,ಈ ಬಗ್ಗೆ ಮಾತನಾಡಿದ ಎಸ್.ಪಿ.ಚೇತನ್, ಎಲ್ಲಾ ಯಾಂಗಲ್ ನಲ್ಲೂ ತನಿಖೆ ನಡೆಸಲಾಗುತ್ತದೆ, ಹಾಗೂ ಅವರ ವೈರಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತದೆ, ಆದಷ್ಟು ಬೇಗ ಕೊಲೆ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದಿದ್ದಾರೆ..////

Web Title : Davanagere Rowdy sheater Bulla Naga Murder
(Get Kannada news Live alerts @ kannadanews.today)

Follow us On

FaceBook Google News

Read More News Today