ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ, ಗರ್ಭಿಣಿ ಸಾವು
death of pregnant woman in Accident by Driver out of control - Aurad Taluk
KNT [ Kannada News Today ] :
ಕಲಬುರಗಿ : ಗರ್ಭಿಣಿ ಮಹಿಳೆಯರಿದ್ದ ಟಂಟಂ ಪಲ್ಟಿಯಾಗಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಔರಾದ್ ಗ್ರಾಮದ ಬಳಿ ಜರುಗಿದೆ. ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿದ್ದು, ಅವಘಡದಲ್ಲಿ ಪ್ರಿಯಾಂಕಾ (25) ಮೃತಪಟ್ಟಿದ್ದಾರೆ.
ಮಾಸಿಕ ಚಿಕಿತ್ಸೆಗಾಗಿ ಭೂಸಣಗಿ ಗ್ರಾಮದಿಂದ ಔರಾದ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿ ಮಹಿಳೆಯರು ಬಂದಿದ್ದರು. ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ಮರಳಿ ತಮ್ಮೂರಿಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿದೆ.
ತಕ್ಷಣ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮತ್ತಿಮೂಡ್ ಅವರು ತಮ್ಮ ಕಾರ್ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಪ್ರಿಯಾಂಕಾ ಸಾವಿಗೀಡಾಗಿದ್ದಾರೆ. ಅಪಘಾತ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.///
Web Title : death of pregnant woman in Accident by Driver out of control
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
(ಕನ್ನಡ ಸುದ್ದಿಗಳು Kannada News Today, KNT News Network)
Follow us On
Google News |