Crime News: ಕಿಲಾಡಿ ಲೇಡಿ ಗ್ಯಾಂಗ್ ಅಂದರ್
ಜನನಿಬಿಡ ಮಾರುಕಟ್ಟೆ ಪ್ರದೇಶಗಳು, ಮೆಟ್ರೋ ರೈಲುಗಳು, ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಂದ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಕಿಲಾಡಿ ಲೇಡಿ ಗ್ಯಾಂಗ್ ಅನ್ನು ದೆಹಲಿ ಪೊಲೀಸರು ಮತ್ತು ವಿಶೇಷ ಮೆಟ್ರೋ ಘಟಕವು ಬಂಧಿಸಿದೆ.
ನವದೆಹಲಿ: ಜನನಿಬಿಡ ಮಾರುಕಟ್ಟೆ ಪ್ರದೇಶಗಳು, ಮೆಟ್ರೋ ರೈಲುಗಳು, ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಂದ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಕಿಲಾಡಿ ಲೇಡಿ ಗ್ಯಾಂಗ್ ಅನ್ನು ದೆಹಲಿ ಪೊಲೀಸರು ಮತ್ತು ವಿಶೇಷ ಮೆಟ್ರೋ ಘಟಕವು ಬಂಧಿಸಿದೆ.
ಗ್ಯಾಂಗ್ಗೆ ಸೇರಿದ ಆರು ಮಹಿಳೆಯರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಲಕ್ಷ್ಮಿ, ವರ್ಷ, ಪೂಜಾ, ಶಶಿ, ಅಂಚಲ್ ಮತ್ತು ಯುಮುನಾ ಎಂದು ಗುರುತಿಸಲಾಗಿದೆ.
ದೆಹಲಿಯ ದ್ವಾರಕಾದ ರೋಹಿತ್ ರಾಜ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ದೆಹಲಿಯ ದ್ವಾರಕಾದಲ್ಲಿ ನೆಲೆಸಿರುವ ರೋಹಿತ್ ರಾಜ್, ಮೆಟ್ರೋ ರೈಲು ಹತ್ತಲು ತನ್ನ ಪೋಷಕರು ಮತ್ತು ಸಹೋದರನೊಂದಿಗೆ ಆನಂದ್ ವಿಹಾರ್ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು. ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ ಅದರಲ್ಲಿದ್ದ ಐವರು ಗ್ಯಾಂಗ್ ನ ಮಹಿಳೆಯರು ಬ್ಯಾಗ್ ನಲ್ಲಿದ್ದ ವಾಲೆಟ್ ಕದ್ದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಾಲೆಟ್ ನಲ್ಲಿ 1 ಲಕ್ಷ ರೂಪಾಯಿ ಮೌಲ್ಯದ ಎರಡು ಚಿನ್ನದ ಸರಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇದ್ದು ಅದರಲ್ಲಿ ಸ್ವಲ್ಪ ನಗದು ಇತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಐದರಿಂದ ಆರು ಮಹಿಳೆಯರು ಕೃತ್ಯ ಎಸಗಿರುವುದು ಪತ್ತೆಯಾಗಿದೆ.
ಅವರಿಗಾಗಿ ಶೋಧ ನಡೆಸಲಾಗಿದ್ದು, ಕರೆ ರೆಕಾರ್ಡಿಂಗ್ ಆಧರಿಸಿ ಆರೋಪಿಗಳು ಉತ್ತರಾಖಂಡದ ಹರಿದ್ವಾರದಲ್ಲಿದ್ದಾರೆ ಎಂದು ಗುರುತಿಸಲಾಗಿದೆ. ಹರಿದ್ವಾರದಲ್ಲಿ ಪೊಲೀಸರು ಆರು ಮಹಿಳೆಯರನ್ನು ಬಂಧಿಸಿದ್ದಾರೆ. ಅವರಿಂದ ರೂ. 30,000 ನಗದನ್ನು ಸಹ ವಶಪಡಿಸಿಕೊಳ್ಳಲಾಗಿದೆ..
ಆರೋಪಿಗಳು ಕಡಿಮೆ ಆದಾಯದ ಗುಂಪುಗಳಿಗೆ ಸೇರಿದ ನಿರುದ್ಯೋಗಿ ಮಹಿಳೆಯರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರಾದ ಲಕ್ಷ್ಮಿ ಮತ್ತು ವರ್ಷಾ ಅವರು ಈ ಹಿಂದೆ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Delhi Metro Police Busted Gang Of Women Pickpockets
Follow Us on : Google News | Facebook | Twitter | YouTube