ನಾಪತ್ತೆಯಾಗಿದ್ದ ಹೊನ್ನಾವರದ ಇಬ್ಬರು ಶವವಾಗಿ ಪತ್ತೆ

Detect two missing bodies of Honnavar

ನಾಪತ್ತೆಯಾಗಿದ್ದ ಹೊನ್ನಾವರದ ಇಬ್ಬರು ಶವವಾಗಿ ಪತ್ತೆ

ಹೊನ್ನಾವರ: ಶರಾವತಿ ನದಿಯಲ್ಲಿ ಗುರುವಾರ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರು ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ತಾಲೂಕಿನ ಇಡಗುಂಜಿಯಲ್ಲಿ ಪರಮೇಶ್ವರ ಅಂಬಿಗ ಮತ್ತು ಗಣಪತಿ ಅಂಬಿಗ ಮೀನುಗಾರಿಕೆಗೆ ತೆರಳಿದ್ದು ನಾಪತ್ತೆ ಯಾಗಿದ್ದರು. ಇದೀಗ ಅವರು ಮೃತಪಟ್ಟಬಗ್ಗೆ ವರದಿಯಾಗಿದ್ದು ಶವವಾಗಿ ಪತ್ತೆಯಾಗಿದ್ದಾರೆ. 
ಗುರುವಾರ ಮೀನುಗಾರಿಕೆಗೆ ತೆರಳಿದ್ದ ಈ ಇಬ್ಬರು ರಾತ್ರಿಯಾದರೂ ವಾಪಸ್ಸಾಗಿ ರಲಿಲ್ಲ . ಇದರಿಂದ ಆತಂಕಕ್ಕೊಳಗಾದ ಮನೆಯವರು ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಂದು ಬೆಳಿಗ್ಗೆ ನದಿಯಲ್ಲಿ ಹುಡುಕಾಟ ನಡೆಸಿದ ಪೊಲೀಸರು ಶವ ಪತ್ತೆಹಚ್ಚಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. //// ವರದಿ : ಗಣೇಶ್ ಜೋಶಿ

WebTitle : ನಾಪತ್ತೆಯಾಗಿದ್ದ ಹೊನ್ನಾವರದ ಇಬ್ಬರು ಶವವಾಗಿ ಪತ್ತೆ – Detect two missing bodies of Honnavar

>>> ಕ್ಲಿಕ್ಕಿಸಿ : Karnataka Crime News | Kannada Crime News

Follow us On

FaceBook Google News

Read More News Today