ವಸೂಲಿ ದಂದೆಗಿಳಿದ ದೊಡ್ಡಬಳ್ಳಾಪುರ ವೈದ್ಯ

ಬಡವರ ಆರೋಗ್ಯ ಸುಧಾರಣೆಗಾಗಿ ಸರ್ಕಾರವು ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸಿದ್ದು ಆದರೆ ಈ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಚಿಕಿತ್ಸೆಗಾಗಿ ಬರುವ ಬಡರೋಗಿಗಳ ಬಳಿ ವಸೂಲಾತಿಗೆ ಇಳಿದಿದ್ದಾರೆ.

Online News Today Team

ಬಡವರ ಆರೋಗ್ಯ ಸುಧಾರಣೆಗಾಗಿ ಸರ್ಕಾರವು ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸಿದ್ದು ಆದರೆ ಈ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಚಿಕಿತ್ಸೆಗಾಗಿ ಬರುವ ಬಡರೋಗಿಗಳ ಬಳಿ ವಸೂಲಾತಿಗೆ ಇಳಿದಿದ್ದಾರೆ.

ಹೌದು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾರಾಯಣಪ್ಪ ಎಂಬುವರ ಮಗ ತಿರುಮಲೇಶ್ ನ ಶಸ್ತ್ರಚಿಕಿತ್ಸೆಗಾಗಿ 30000 ಹಣ ಪಡೆದು ಇನ್ನೂ ಹೆಚ್ಚಿನ ಹಣ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ನಾರಾಯಣಪ್ಪ ಆರೋಪಿಸಿದ್ದಾರೆ .ದೂರಿನ ಪ್ರತಿ

ನಾರಾಯಣಪ್ಪನವರ ಮಗ ತಿರುಮಲೇಶ್ ಕೂಲಿ ಕೆಲಸ ಮಾಡುತ್ತಿರುವಾಗ ಕುಸಿದುಬಿದ್ದು ಬಲಗಾಲಿನ ತೊಡೆ ಮೂಳೆ ಮುರಿದಿದ್ದು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ ಆದರೆ ಶಸ್ತ್ರಚಿಕಿತ್ಸೆಗಾಗಿ 30 ಸಾವಿರ ರೂಪಾಯಿಗಳನ್ನು ಪಡೆದಿರುವ ವೈದ್ಯರು ಇನ್ನೂ ಹೆಚ್ಚಿನ ಹಣ ನೀಡಬೇಕೆಂದು ಬಡ ಕೂಲಿ ಕಾರ್ಮಿಕರಾದ ನಾರಾಯಣಪ್ಪ ರವರ ಬಳಿ ಪೀಡಿಸುತ್ತಿದ್ದಾರೆ, ಹಣ ನೀಡದಿದ್ದಲ್ಲಿ ಚಿಕಿತ್ಸೆ ನೀಡುವುದಿಲ್ಲ ಎಂದು ಭಯ ಪಡಿಸುತ್ತಿದ್ದಾರೆ ಎಂದು ನಾರಾಯಣಪ್ಪ ವೈದ್ಯರ ವಿರುದ್ಧ ಆರೋಪಿಸಿದ್ದಾರೆ.

ಈ ಕುರಿತಂತೆ ನಾರಾಯಣಪ್ಪನವರು ಮುಖ್ಯ ಆರೋಗ್ಯ ಆಡಳಿತಾಧಿಕಾರಿಗಳಿಗೆ ದೂರು ನೀಡಿದ್ದು ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಮುಖ್ಯ ಅಧಿಕಾರಿಗಳು ಈ ಕುರಿತಾಗಿ ಕೂಡಲೇ ತನಿಖೆ ನಡೆಸಿ ಸತ್ಯಾಸತ್ಯತೆ ಅರಿತು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾರಾಯಣಪ್ಪ ಮನವಿ ಮಾಡಿದ್ದಾರೆ

ಹರೀಶ್, ದೊಡ್ಡಬಳ್ಳಾಪುರ

Follow Us on : Google News | Facebook | Twitter | YouTube