Welcome To Kannada News Today

ಬಾರಿ ಎಡವಟ್ಟು, ಮಹಿಳೆಯ ಸಿಸೇರಿಯನ್ ಸಮಯದಲ್ಲಿ ಮಗುವಿನ ತಲೆ ಕತ್ತರಿಸಿದ ವೈದ್ಯರು

Doctors cut head of baby during cesarean of Kurnool woman

🌐 Kannada News :

ಕರ್ನೂಲ್ : ಇದನ್ನು ವೈದ್ಯಕೀಯ ನಿರ್ಲಕ್ಷ್ಯ ಅನ್ನಬೇಕೋ ಅಥವಾ ಆಕಸ್ಮಿಕ ಪ್ರಕರಣ ಎಂದು ಕರೆಯಬೇಕೋ, ಗೊತ್ತಾಗುತ್ತಿಲ್ಲ, ಹೌದು ಇಲ್ಲಿನ ಸರ್ಕಾರಿ ಹೆರಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಇನ್ನೂ ಕಣ್ಣು ಬಿಟ್ಟು ಲೋಕ ನೋಡದ ಮಗು, ಮತ್ತೆ ಕಣ್ಣು ಮುಚ್ಚಿದೆ.

ವೈದ್ಯರು ನಿರ್ಲಕ್ಷ್ಯದಿಂದ ಕರ್ನೂಲ್ ಜಿಲ್ಲೆಯ ನಂದ್ಯಾಲ್ ನಲ್ಲಿ ಸಿಸೇರಿಯನ್ ಸಮಯದಲ್ಲಿ ಶಿಶುವಿನ ತಲೆ ಕತ್ತರಿಸಿದ್ದಾರೆ. ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಪೋಷಕರು ವ್ಯದ್ಯರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿ ಮಹಿಳೆ ಶ್ರೀಲಕ್ಷ್ಮಿ ಅವರನ್ನು ಹೆರಿಗೆ ನೋವಿಗೆ ಕರ್ನೂಲ್ ಜಿಲ್ಲೆಯ ನಂದ್ಯಾಲ್‌ನಲ್ಲಿರುವ ಹೆರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.

ಮಗುವಿನ ಸ್ಥಾನ ಬದಲಾದ ಕಾರಣ ಸಿಸೇರಿಯನ್ ಮಾಡುವುದು ಸುರಕ್ಷಿತ ಆಯ್ಕೆ ಎಂದು ಆಸ್ಪತ್ರೆಯ ವೈದ್ಯರು ಮಹಿಳೆ ಮತ್ತು ಆಕೆಯ ಸಂಬಂಧಿಕರಿಗೆ ತಿಳಿಸಿದ್ದಾರೆ. ನಂತರ ಮಹಿಳೆಗೆ ಅರಿವಳಿಕೆ ನೀಡಲಾಯಿತು.

ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗುವಿನ ತಲೆಯನ್ನು ಕತ್ತರಿಸಲಾಗಿದೆ ಎಂದು ಕುಟುಂಬ ಆರೋಪಿಸಿದೆ. ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಆರೋಪವನ್ನು ತಳ್ಳಿಹಾಕಿದ್ದಾರೆ. ಏತನ್ಮಧ್ಯೆ, ಶಿಶುವಿನ ತಲೆ ಇನ್ನೂ ಗರ್ಭದಲ್ಲಿಯೇ  ಇರುವುದರಿಂದ ತಾಯಿಗೆ ಜ್ವರ ಬಂದಿದೆ. ಶಿಶುವಿನ ತಲೆ ಹೊರ ತೆಗೆಯಲು ಮಹಿಳೆಯನ್ನು ಸದ್ಯ ಕರ್ನೂಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಇನ್ನೂ ಕುಟುಂಬದಿಂದ ಯಾವುದೇ ದೂರು ದಾಖಲಾಗಿಲ್ಲ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile