ನಾಯಿ ಕಿಡ್ನಾಪ್, ಸಿಕ್ಕಿಬಿದ್ದ ಕಳ್ಳ ಹೇಳಿದ್ದು ಏನು ಗೊತ್ತಾ ?

Dog kidnapping for ten thousand, You know what the thief said

ನಾಯಿ ಕಿಡ್ನಾಪ್, ಸಿಕ್ಕಿಬಿದ್ದ ಕಳ್ಳ ಹೇಳಿದ್ದು ಏನು ಗೊತ್ತಾ ? – Dog kidnapping for ten thousand, You know what the thief said

ನಾಯಿ ಕಿಡ್ನಾಪ್, ಸಿಕ್ಕಿಬಿದ್ದ ಕಳ್ಳ ಹೇಳಿದ್ದು ಏನು ಗೊತ್ತಾ ?

ಕನ್ನಡ ನ್ಯೂಸ್ ಟುಡೇ : ಹತ್ತು ಸಾವಿರಕ್ಕಾಗಿ ನಾಯಿಯನ್ನು ಕದ್ದ ಕಳ್ಳ, ಆಂಧ್ರ ಪ್ರದೇಶದ ಅನಂತಪುರಂ ನ ಕದಿರಿಯಲ್ಲಿ ನಡೆದ ಈ ಘಟನೆ ಕೇಳುಗರಿಗೆ ಆಸಕ್ತಿ ಹೆಚ್ಚಿಸಿದೆ. ಸಧ್ಯ ನಾಯಿ ಮತ್ತು ಕಿಡ್ನಾಪರ್ ಇಬ್ಬರು ಸಿಕ್ಕಿದ್ದು, ಆ ಸ್ಟೋರಿ ಇಲ್ಲಿದೆ ನೋಡಿ.

ಅಲ್ಲಿನ ಸೋಮೇಶ್ ನಗರದ ವಾಸಿ ಚಂದ್ರ ಮೌಳಿ ರೆಡ್ಡಿ ಗ್ಯಾಸ್ ಏಜೆನ್ಸಿ ನಡೆಸ್ತಾರೆ, ಕೆಲ ದಿನಗಳ ಹಿಂದೆ ಒಂದು ನಾಯಿ ಮರಿ ತಂದು ತನ್ನ ಗ್ಯಾಸ್ ಗೋಡನ್ ನಲ್ಲಿ ಇರಿಸ್ತಾರೆ, ಸದಾ ಗೋಡನ್ ಮತ್ತು ಗ್ಯಾಸ್ ಸಿಲಿಂಡರ್ ಗಳ ಕಾವಲು ಕಾಯುತ್ತಿದ್ದ ನಾಯಿ ಸ್ವಲ್ಪ ದಿನದಲ್ಲಿಯೇ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಹಾಗೂ ಚಂದ್ರ ಮೌಳಿ ರೆಡ್ಡಿ ಪತ್ನಿ ಭಾರತಿಗೆ ಬಹಳ ಅಚ್ಚುಮೆಚ್ಚಿನ ಸ್ನೇಹಿತ ಆಗೋಗುತ್ತೆ ಆ ನಾಯಿ.

ಸ್ವಲ್ಪ ದಿನದ ನಂತರ ಗೋಡನ್ ಬಳಿ ಬೈಕ್ ನಲ್ಲಿ ವೇಗವಾಗಿ ಬಂದ ಅನಾಮಿಕ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ನಾಯಿಯನ್ನು ಕಿಡ್ನಾಪ್ ಮಾಡಿ, ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಹಳ ಪ್ರೀತಿಯಿಂದ ಸಾಕಿದ್ದ ನಾಯಿಯನ್ನು ಕಣ್ಣ ಮುಂದೆಯೇ ಕದ್ದೊಯ್ದರೆ ಯಾರು ತಾನೇ ಸುಮ್ಮನಿರ್ತಾರೆ ಹೇಳಿ.

ನಾಯಿಯ ಕಿಡ್ನಾಪ್ ಬಗ್ಗೆ ಗೋಡನ್ ಯಜಮಾನ ಕದರಿ ಗ್ರಾಮಾಂತರ ಠಾಣೆಗೆ ದೂರು ನೀಡುತ್ತಾರೆ. ನಾಯಿ ಕದ್ದ ಆಸಾಮಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗುತ್ತಾರೆ. ನಾಯಿಯನ್ನು ಕದ್ದ ಆತ ” ಮಲ್ಲಿ ” ಎಂದು ತಿಳಿದು ಬರುತ್ತದೆ. ಅವನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

” ಪಟ್ಟಣದ ವ್ಯಕ್ತಿಯೊಬ್ಬ, ತನ್ನ ಮನೆಯ ಕಾವಲಿಗೆ ಒಳ್ಳೆಯ ನಾಯಿ ತಂದು ಕೊಟ್ಟರೆ ಹತ್ತು ಸಾವಿರ ಕೊಡುವುದಾಗಿ ಹೇಳಿದ್ದರು, ಅದಕ್ಕಾಗಿ ತಾನು ಈ ಕೃತ್ಯವೆಸಗಿದ್ದೇನೆ ” ಎಂದು ತಿಳಿಸಿದ್ದಾನೆ. ಪೊಲೀಸರಿಗೆ ಏನು ಮಾಡ ಬೇಕ್ ಎಂದು ತಿಳಿಯದೆ, ಕೌನ್ಸಲಿಂಗ್ ಮಾಡಿ, ಬುದ್ದಿ ಹೇಳಿ ಕಳುಹಿಸಿ ಕೊಟ್ಟಿದ್ದಾರೆ. ಹಾಗೂ ನಾಯಿಯನ್ನು ಅದರ ಯಜಮಾನನಿಗೆ ಒಪ್ಪಿಸಿದ್ದಾರೆ.

ಒಟ್ಟಿನಲ್ಲಿ ಈ ರೀತಿ ನಾಯಿ ಕಿಡ್ನಾಪ್ ಕೇಸ್ ಸುಖಾಂತ್ಯ ಕಂಡಿದೆ, ತನ್ನ ಯಜಮಾನನ ಕೈಸೇರಿದ ನಾಯಿಗೂ ಸಂತಸ, ಬಹಳ ಹಚ್ಚಿಕೊಂಡಿದ್ದ ಅದರ ಯಜಮಾನನಿಗೂ ಸಂತೋಷವಾಗಿದೆ….. ////

Web Title : Dog kidnapping for ten thousand, You know what the thief said

Scroll Down To More News Today