Pakistan, ಪಾಕಿಸ್ತಾನದಿಂದ ಅಕ್ರಮವಾಗಿ ದೇಶಕ್ಕೆ ಡ್ರಗ್ಸ್.. 200 ಕೋಟಿ ಮೌಲ್ಯದ ಹೆರಾಯಿನ್ ವಶ
ಪಂಜಾಬ್ ನ ಭಾರತ-ಪಾಕಿಸ್ತಾನ ಗಡಿ ಸಮೀಪದ ಫಿರೋಜ್ ಪುರ ಸೆಕ್ಟರ್ ನಲ್ಲಿ ಭಾನುವಾರ ಬಿಎಸ್ ಎಫ್ ಸಿಬ್ಬಂದಿ 40 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಫಿರೋಜ್ ಪುರ : ಪಂಜಾಬ್ ನ ಭಾರತ-ಪಾಕಿಸ್ತಾನ ಗಡಿ ಸಮೀಪದ ಫಿರೋಜ್ ಪುರ ಸೆಕ್ಟರ್ ನಲ್ಲಿ ಭಾನುವಾರ ಬಿಎಸ್ ಎಫ್ ಸಿಬ್ಬಂದಿ 40 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 200 ಕೋಟಿ ರೂ. ಎನ್ನಾಲಾಗಿದೆ.. ಎರಡು ವಿಭಿನ್ನ ಪ್ರದೇಶಗಳಲ್ಲಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ಮಿಯಾನ್ ವ್ಯಾಲಿ ನಾರ್ತ್ ಔಟ್ ಪೋಸ್ಟ್ ಬಳಿ 101 ಬೆಟಾಲಿಯನ್ ಗಳಿಗೆ ಸೇರಿದ 22 ಪ್ಯಾಕೆಟ್ ಗಳಲ್ಲಿ ಒಟ್ಟು 34 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಮೊನ್ನೆ ಭಾನುವಾರ ಮೊಹಮ್ಮದ್ ವಾಲಾ ಔಟ್ ಪೋಸ್ಟ್ ಬಳಿ 116 ಬೆಟಾಲಿಯನ್ ಗಳು 6 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಶಿಕ್ಷಣಾಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
Follow Us on : Google News | Facebook | Twitter | YouTube