Welcome To Kannada News Today

Crime News: ಸ್ವಿಗ್ಗಿ ಬಾಯ್ಸ್ ಸೋಗಿನಲ್ಲಿ ಮಾದಕ ವಸ್ತು ಪೂರೈಕೆ, 7 ಮಂದಿ ಬಂಧನ

drugs mafia in bengaluru as swiggy delivery boy: ಎನ್‌ಸಿಬಿ ಅಧಿಕಾರಿಗಳು ಸಿನಿಮೀಯ ಶೈಲಿಯಲ್ಲಿ ಸ್ವಿಗ್ಗಿ ಬಾಯ್ಸ್ ಸೋಗಿನಲ್ಲಿ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

🌐 Kannada News :

ಬೆಂಗಳೂರು: ಆಹಾರ ಪೂರೈಸುವ ನೆಪದಲ್ಲಿ, ಸ್ವಿಗ್ಗಿ ಫುಡ್‌ ಡೆಲಿವರಿ ಬಾಯ್ಸ್ ಸೋಗಿನಲ್ಲಿ ರಹಸ್ಯವಾಗಿ ಗ್ರಾಹಕರಿಗೆ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಖತಾರ್ ನಾಕ್ ಜಾಲವನ್ನು ಬೆಂಗಳೂರಿನ ನಾರ್ಕೋಟಿಕ್‌ ಕಂಟ್ರೋಲ್‌ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿದ್ದಾರೆ, 7 ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ಇನ್ನು, ಬಂಧಿತ 7 ಆರೋಪಿಗಳಿಂದ ಸುಮಾರು 5.20 ಲಕ್ಷ ರೂ, 140 ಕೆಜಿ ಹೈ ಗ್ರೇಡ್‌ ಗಾಂಜಾ, 2 ಕಾರುಗಳನ್ನು ಎನ್‌ಸಿಬಿ ಅಧಿಕಾರಿಗಳು ಜಪ್ತಿ ಮಾಡಿ ಕೊಂಡಿದ್ದಾರೆ.

ಈ ಬಂಧಿತ ಸ್ವಿಗ್ಗಿ ಫುಡ್‌ ಡೆಲಿವರಿ ಬಾಯ್ಸ್ ಸೋಗಿನ ಆರೋಪಿಗಳು, ಪೊಲೀಸರು ಹಾಗೂ ಎನ್‌ಸಿಬಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ನಗರದ ಹಲವು ಕಡೆ ಗಾಂಜಾ ಪೂರೈಕೆ ಮಾಡುತ್ತಿದ್ದರು.

drugs mafia in bengaluru as swiggy delivery boy
drugs mafia in bengaluru as swiggy delivery boy

ಅದಕ್ಕಾಗಿ ಅವರು ಈ ಹೊಸ ತಂತ್ರ ಮಾಡಿಕೊಂಡಿದ್ದರು. ಇನ್ನು 7 ಮಂದಿ ಬಂಧಿತರ ಪೈಕಿ ಕೆಲವರು ಸ್ವಿಗಿಯಲ್ಲಿ ಫುಡ್‌ ಡೆಲಿವರಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಜಾಲದ ಇತರ ಕೆಲವರು ಗಾಂಜಾವನ್ನು ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಖರೀದಿಸಿ ತಂದು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುತ್ತಿದ್ದರು.

ನಂತರ 10 ರಿಂದ 50 ಗ್ರಾಂ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳಂತೆ ಮಾಡಿ, ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಸದ್ಯ ಪೋಲೀಸರ ಕಾರ್ಯ ವೈಖರಿಯಿಂದ ಬೃಹತ್ ಜಾಲ ಸಿಕ್ಕಿಬಿದ್ದಿದೆ.

📣 ಇನ್ನಷ್ಟು ಕನ್ನಡ ಬೆಂಗಳೂರು ನ್ಯೂಸ್ ಗಳಿಗಾಗಿ Bangalore News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today