ನಿಂಬೆ ಹಣ್ಣಿನ ತೋಟಕ್ಕೆ ಕಳ್ಳರ ಕಾಟ !

ನಿಂಬೆಹಣ್ಣಿನ ಬೆಲೆಯಲ್ಲಿ ಏರಿಕೆಯಿಂದ ರೈತರು ಸಂತಸ ಪಡಬೇಕೆ ? ಅಥವಾ ಬೆಲೆ ಏರಿಕೆ ನಡುವೆ ಕಳ್ಳರ ಕಾಟಕ್ಕೆ ದುಃಖ ಪಡಬೇಕೆ ? ಬೇಸಿಗೆಯಲ್ಲಿ ತಂಪಾಗಿರುವ ನಿಂಬೆ ಹಣ್ಣಿನ ಬೆಲೆ ಸಾಮಾನ್ಯಕ್ಕಿಂತ ಐದು ಪಟ್ಟು ಹೆಚ್ಚಾಗಿದೆ.

ನಿಂಬೆಹಣ್ಣಿನ ಬೆಲೆಯಲ್ಲಿ ಏರಿಕೆಯಿಂದ ರೈತರು ಸಂತಸ ಪಡಬೇಕೆ ? ಅಥವಾ ಬೆಲೆ ಏರಿಕೆ ನಡುವೆ ಕಳ್ಳರ ಕಾಟಕ್ಕೆ ದುಃಖ ಪಡಬೇಕೆ ? ಬೇಸಿಗೆಯಲ್ಲಿ ತಂಪಾಗಿರುವ ನಿಂಬೆ ಹಣ್ಣಿನ ಬೆಲೆ ಸಾಮಾನ್ಯಕ್ಕಿಂತ ಐದು ಪಟ್ಟು ಹೆಚ್ಚಾಗಿದೆ.

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬಿತ್ತೂರು ಸಮೀಪದ ಶಿವದಿನ್‌ನ ಪೂರ್ವದ ಗ್ರಾಮದಲ್ಲಿ ಅಭಿಷೇಕ್ ನಿಶಾದ್ ಅವರ ತೋಟದಲ್ಲಿ ಮೂರು ದಿನಗಳಲ್ಲಿ ಸುಮಾರು 15,000 ನಿಂಬೆಹಣ್ಣುಗಳನ್ನು ಕಳ್ಳರು ದೋಚಿದ್ದಾರೆ. ಅವುಗಳ ತೂಕ ಸುಮಾರು 750 ಕೆ.ಜಿ.

ಸಾಮಾನ್ಯವಾಗಿ 50-60 ರೂ. ಮೀರದ ನಿಂಬೆ ಹಣ್ಣಿನ ಬೆಲೆ ಸದ್ಯ 300 ರೂ ಇದೆ, ಆ ಲೆಕ್ಕಾಚಾರದ ಪ್ರಕಾರ ಕಳವಾದ ಸೊತ್ತಿನ ಮೌಲ್ಯ ಸುಮಾರು 2 ಲಕ್ಷಕ್ಕೂ ಅಧಿಕ. ರೈತರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕಳ್ಳತನದಿಂದ ಎಚ್ಚೆತ್ತ ಇತರೆ ರೈತರು ತಮ್ಮ ತೋಟಗಳಿಗೆ 24 ಗಂಟೆ ಕಾವಲು ಕಾಯುತ್ತಿದ್ದಾರೆ.

Farmers Deploy Guards To Protect Lemons In Up

Follow Us on : Google News | Facebook | Twitter | YouTube