Crime News, ಕುಡಿದ ಮತ್ತಿನಲ್ಲಿ ಮಗು ಕಾಲಿಡಿದು ಗೋಡೆಗೆ ಬಡಿದ ತಂದೆ..!

ಅಂಬೆಗಾಲಿಡುವ ಮಗು ಕಾಲು ಹಿಡಿದು ಗೋಡೆಗೆ ಬಡೆದಿದ್ದಾನೆ. ದೆಹಲಿಯ ಹೊರಭಾಗದ ಭೈಸ್ವಾ ಡೈರಿ ಪ್ರದೇಶದಲ್ಲಿ ಇದೇ ತಿಂಗಳ 3 ರಂದು ಮಧ್ಯರಾತ್ರಿ ಈ ಘಟನೆ ನಡೆದಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧಾರುಣ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ಪ್ರಾರಂಭವಾದಾಗ, ಅಂಬೆಗಾಲಿಡುವ ಮಗು ಕಾಲು ಹಿಡಿದು ಗೋಡೆಗೆ ಬಡೆದಿದ್ದಾನೆ. ದೆಹಲಿಯ ಹೊರಭಾಗದ ಭೈಸ್ವಾ ಡೈರಿ ಪ್ರದೇಶದಲ್ಲಿ ಇದೇ ತಿಂಗಳ 3 ರಂದು ಮಧ್ಯರಾತ್ರಿ ಈ ಘಟನೆ ನಡೆದಿದೆ.

ವಿವರಕ್ಕೆ ಹೋದರೆ.. ರವಿ ರಾಯ್ (26) ಭೈಸ್ವಾ ಡೈರಿ ಏರಿಯಾದಲ್ಲಿ ಪತ್ನಿ ಮತ್ತು ಮೂರು ತಿಂಗಳ ಮಗುವಿನೊಂದಿಗೆ ವಾಸವಾಗಿದ್ದಾರೆ. ಆದರೆ, ಪ್ರತಿನಿತ್ಯ ಕುಡಿತದ ಚಟಕ್ಕೆ ಬಿದ್ದ ಈತ ಪತ್ನಿಯೊಂದಿಗೆ ಜಗಳವಾಡುತ್ತಿದ್ದ.

ಇದೇ ತಿಂಗಳ 3ರಂದು ರಾತ್ರಿಯೂ ರವಿ ರಾಯ್ ಪತ್ನಿ ಜತೆ ಜಗಳವಾಡಿದ್ದ. ಇಬ್ಬರ ನಡುವೆ ಮಾತು ಬೆಳೆಯುತ್ತಿದ್ದಂತೆ ರವಿ ಕೋಪದಿಂದ ಕೂಗಾಡಿದ್ದಾನೆ. ಮಗು ಕಾಲು ಹಿಡಿದು ಗೋಡೆಗೆ ಬಡೆದಿದ್ದಾನೆ.. ಘಟನೆಯಲ್ಲಿ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಮದ್ಯದ ಅಮಲಿನಲ್ಲಿದ್ದ ರವಿ ರಾಯ್ ನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Stay updated with us for all News in Kannada at Facebook | Twitter
Scroll Down To More News Today