ಮಗನಿಂದಲೇ ತಂದೆ ಹತ್ಯೆ: ಮಾನಸಿಕ ಅಸ್ವಸ್ಥ ಮಗನ ಕೈಯಿಂದ ವೃದ್ಧನ ಬರ್ಬರ ಹತ್ಯೆ

ಮಾನಸಿಕ ಅಸ್ವಸ್ಥ ಮಗನ ಕೈಯಿಂದ ವೃದ್ಧನೊಬ್ಬ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಮಲಗಿದ್ದ ತಂದೆಗೆ ಮಗನೆ ದೊಣ್ಣೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಲಕ್ನೋ: ಮಾನಸಿಕ ಅಸ್ವಸ್ಥ ಮಗನ ಕೈಯಿಂದ ವೃದ್ಧನೊಬ್ಬ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಮಲಗಿದ್ದ ತಂದೆಗೆ ಮಗನೆ ದೊಣ್ಣೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಬಂದಾ ಜಿಲ್ಲೆಯ ರಾಂಭವೈನ್ (70) ಮತ್ತು ರಾಮ್‌ಕುಮಾರ್ (37) ಇಬ್ಬರೂ ತಂದೆ ಮತ್ತು ಮಗ. ಆದರೆ ರಾಮ್‌ಕುಮಾರ್ ಮಾನಸಿಕ ಅಸ್ವಸ್ಥ. ಈ ವೇಳೆ ರಾಮ್‌ಕುಮಾರ್ ಭಾನುವಾರ ರಾತ್ರಿ ಮಲಗಿದ್ದ ತಂದೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ.

ಆತನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕೊಲೆ ಮಾಡಿದ ಮಗನಿಗೆ ಸ್ವಲ್ಪ ಸಮಯದಿಂದ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Stay updated with us for all News in Kannada at Facebook | Twitter
Scroll Down To More News Today