Video, ಬೈಕ್ ನಲ್ಲಿ ಕೊಂಡೊಯ್ಯುತ್ತಿದ್ದ ಪಟಾಕಿ ಸಿಡಿದು ಅಪ್ಪ ಮಗ ಸಾವು

ಪಟಾಕಿ ಸಿಡಿದ ಪರಿಣಾಮ ಅಪ್ಪ, 7 ವರ್ಷದ ಮಗ ಸಾವನ್ನಪ್ಪಿದ್ದಾರೆ, ದೇಶಿ ಪಟಾಕಿಗಳ ಬ್ಯಾಗ್‌ ಸ್ಫೋಟಗೊಂಡು (firecrackers explode) ಸ್ಕೂಟರ್‌ನಲ್ಲಿ ಹೋಗುತ್ತಿದ್ದ ತಂದೆ-ಮಗ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಹತ್ತಿರ ಸವಾರಿ ಮಾಡುತ್ತಿದ್ದ ಮೂವರು ಗಾಯಗೊಂಡಿದ್ದಾರೆ.

ಚೆನ್ನೈ (Chennai ): ಪಟಾಕಿ ಸಿಡಿದ ಪರಿಣಾಮ ಅಪ್ಪ, 7 ವರ್ಷದ ಮಗ ಸಾವನ್ನಪ್ಪಿದ್ದಾರೆ, ದೇಶಿ ಪಟಾಕಿಗಳ ಬ್ಯಾಗ್‌ ಸ್ಫೋಟಗೊಂಡು (firecrackers explode) ಸ್ಕೂಟರ್‌ನಲ್ಲಿ ಹೋಗುತ್ತಿದ್ದ ತಂದೆ-ಮಗ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಹತ್ತಿರ ಸವಾರಿ ಮಾಡುತ್ತಿದ್ದ ಮೂವರು ಗಾಯಗೊಂಡಿದ್ದಾರೆ.

ತಮಿಳುನಾಡಿನ ಕೊಟ್ಟಕುಪ್ಪಂ ಪಟ್ಟಣದಲ್ಲಿ ದೀಪಾವಳಿ ವೇಳೆ ದುರಂತವೊಂದು ನಡೆದಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಸಿ ಮಗನೊಂದಿಗೆ ಸ್ಕೂಟಿಯಲ್ಲಿ ಅತ್ತೆಯ ಬಳಿಗೆ ತೆರಳುತ್ತಿದ್ದ ವ್ಯಕ್ತಿ ಮಾರ್ಗಮಧ್ಯೆ ಮಗನೊಂದಿಗೆ ಸಾವನ್ನಪ್ಪಿದ್ದಾರೆ. ಸ್ಕೂಟಿಯಲ್ಲಿ ಬ್ಯಾಗ್ ನಲ್ಲಿದ್ದ ಪಟಾಕಿ ಸಿಡಿದ ಪರಿಣಾಮ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದೀಪಾವಳಿ ಹಬ್ಬದ ಮುನ್ನಾದಿನದಂದು, ತನ್ನ ಹೆಂಡತಿಯನ್ನು ತವರು ಮನೆಗೆ ಹಬ್ಬಕ್ಕೆಂದು ಕಳುಹಿಸಿದನು. ಗುರುವಾರ ಮಧ್ಯಾಹ್ನ, ತನ್ನ ಎಂಟು ವರ್ಷದ ಮಗನ ಜೊತೆಗೆ, ಸ್ಕೂಟಿಯಲ್ಲಿ ತನ್ನ ಹೆಂಡತಿ ಮನೆಗೆ ಹೋಗಿದ್ದಾನೆ. ಮಾರ್ಗಮಧ್ಯೆ ತನ್ನ ಹುಟ್ಟೂರಾದ ಏರಿಯನ್ ಕುಪ್ಪಂನಲ್ಲಿ ಪಟಾಕಿ ಖರೀದಿಸಿದ್ದಾನೆ. ಪಟಾಕಿಯನ್ನು ಅನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕೊಟ್ಟಕುಪ್ಪಂ ಪಟ್ಟಣದ ಸಮೀಪಕ್ಕೆ ಬರುತ್ತಿದ್ದಂತೆ ರಸ್ತೆಯಲ್ಲಿ ಓಡುತ್ತಿದ್ದ ಸ್ಕೂಟರ್‌ನಲ್ಲಿ ಪಟಾಕಿ ಸಿಡಿದು ಅಪ್ಪ-ಮಗ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಬ್ಬ ಆಚರಿಸಲು ತೆರಳಿದ್ದ ವೇಳೆ ತಂದೆ-ಮಗ ಸಾವನ್ನಪ್ಪಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಂದಿ ರಸ್ತೆಯಲ್ಲಿ ಸ್ಕೂಟಿಯಲ್ಲಿ ಪಟಾಕಿ ಸಿಡಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಕೆಳಗಿನ ವಿಡಿಯೋದಲ್ಲಿ ಆ ದೃಶ್ಯಗಳನ್ನು ನೀವೂ ವೀಕ್ಷಿಸಬಹುದು.

Stay updated with us for all News in Kannada at Facebook | Twitter
Scroll Down To More News Today