ಮದುವೆ ಸಮಾರಂಭದಲ್ಲಿ ಗುಂಡಿನ ದಾಳಿ, ಓರ್ವ ಸಾವು

ಉದ್ರಿಕ್ತರಿಂದ ಗುಂಡಿನ ದಾಳಿ ಓರ್ವ ಸಾವು: ಮದುವೆ ಸಮಾರಂಭಕ್ಕೆ ನುಗ್ಗಿದ ಉದ್ರಿಕ್ತ ವ್ಯಕ್ತಿಯೊಬ್ಬ ಜೈ ಶ್ರೀರಾಮ್.. ಜೈ ಶ್ರೀರಾಮ್ ಎಂದು ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪೊಲೀಸ್ ವರದಿಯ ಪ್ರಕಾರ, ಭೆಸೋಡಿ ಮಂಡಿ ಗ್ರಾಮದ ಧಾರ್ಮಿಕ ಗುರು ಬಾಬಾ ರಾಮ್ ಪಾಲ್ ಅವರ ಅನುಯಾಯಿಗಳು ಡಿಸೆಂಬರ್ 12 ರಂದು ಜಮುನಿಯಾ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಜಮಾಯಿಸಿದ್ದರು. ಆದರೆ ಅವರ ಆಗಮನಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಮದುವೆಗೂ ಮುನ್ನ ಬಾಬಾನ ಅನುಯಾಯಿಗಳು ಹಾಗೂ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿತ್ತು.

ನಂತರ, ಮದುವೆ ಸಮಾರಂಭದಲ್ಲಿ, ಗುಂಪು ಏಕಾಏಕಿ “ಜೈ ಶ್ರೀರಾಮ್.. ಜೈ ಶ್ರೀರಾಮ್” ಎಂದು ಕೂಗಲು ಪ್ರಾರಂಭಿಸಿತು ಮತ್ತು ಗುಂಡಿನ ದಾಳಿ ನಡೆಸಿತು. ಮದುವೆಗೆ ಅತಿಥಿಯಾಗಿ ಬಂದಿದ್ದ ಗ್ರಾಮದ ಹಿರಿಯರಾದ ದೇವಿಲಾಲ್ ಮೀನಾ ಗಂಭೀರವಾಗಿ ಗಾಯಗೊಂಡರು… ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ 11 ಆರೋಪಿಗಳನ್ನು ಗುರುತಿಸಿದ್ದಾರೆ. ಅವರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಒಂದೇ ಗ್ರಾಮದವರು ಎಂಬುದು ಗಮನಾರ್ಹ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today