ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಬ್ಲಾಕ್ ಮೇಲ್ “ಪೋಕಸ್ ಟಿವಿ” ವ್ಯವಸ್ಥಾಪಕ ಅರೆಸ್ಟ್

Focus TV MD Hemanth held for allegedly blackmailing BJP MLA Aravind Limbavali

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಬ್ಲಾಕ್ ಮೇಲ್ “ಪೋಕಸ್ ಟಿವಿ” ವ್ಯವಸ್ಥಾಪಕ ಅರೆಸ್ಟ್

ಬೆಂಗಳೂರಿನ ಪೊಲೀಸರು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿರವರನ್ನು ಬ್ಲಾಕ್ ಮೇಲ್ ಮಾಡಿದ್ದಕ್ಕಾಗಿ ಭಾನುವಾರ ಕನ್ನಡ ಸುದ್ದಿ ವಾಹಿನಿ ಫೋಕಸ್ ಟಿವಿ ವ್ಯವಸ್ಥಾಪಕ ನಿರ್ದೇಶಕನನ್ನು ಬಂಧಿಸಿದ್ದಾರೆ. ಮಹದೇವಪುರ ಎಂಎಲ್ಎ ಅರವಿಂದ ಲಿಂಬಾವಳಿ ಅವರನ್ನು ಬ್ಲಾಕ್ ಮೇಲ್ ಮಾಡಿದ ಹೇಮಂತ್ ಎಂ. ಕುಮಾರ್ ನನ್ನು ಕೇಂದ್ರ ಅಪರಾಧ ಶಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. .

ಶಾಸಕರ ಸೆಕ್ಸ್ ಟೇಪ್ ತನ್ನ ಬಳಿ ಇರುವುದಾಗಿ ಹೇಳಿಕೊಂಡಿದ್ದ, ಈತ ಅದರ ನಾಶಕ್ಕಾಗಿ ಐವತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ಬೆಳಕಿಗೆ ಬಂದಿದೆ. ಯೆಲಹಂಕ ನ್ಯೂ ಟೌನ್ ನಿವಾಸಿಯಾಗಿದ್ದ ಹೇಮಂತ್ 2018 ರಲ್ಲಿ ಟಿವಿ ಚಾನಲ್ ಅನ್ನು ಪ್ರಾರಂಭಿಸಿದ್ದರು.

ಟಿವಿ ಚಾನಲ್ ಓಪನಿಂಗ್ ಗೆ ಭರ್ಜರಿಯಾಗಿ  ಕಾರ್ಯಕ್ರಮಮಾಡಿ, ರಾಜಕೀಯ ವ್ಯಕ್ತಿಗಳನ್ನೂ ಸಹ ಕರೆದು, ಸಕತ್ ಬಿಲ್ಡ್ ಅಪ್ ತಗೊಂಡಿದ್ದ, ಆಸಾಮಿಗೆ ದಿನಕಳೆದಂತೆ ಅದರ ನಿರ್ವಹಣೆ ತಲೆ ಬಿಸಿಮಾಡಿದೆ.

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಬ್ಲಾಕ್ ಮೇಲ್

ಮೇ 2 ರಂದು ಎಂಎಲ್ಎ ಲಿಂಬಾವಳಿಯ ಸಹಾಯಕ ಗಿರೀಶ್ ಭಾರದ್ವಾಜ್ ದೂರು ದಾಖಲಿಸಿದ್ದಾರೆ, ಬೆಂಗಳೂರು ಪೊಲೀಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು.  ಸಿಸಿಬಿ ಮೂಲಗಳ ಪ್ರಕಾರ, ಕೆಲವು ತಿಂಗಳುಗಳ ಹಿಂದೆ ತೀವ್ರ ನಷ್ಟದಿಂದಾಗಿ ಹೇಮಂತ್ ಅವರು ಚಾನಲ್ ಅನ್ನು ಮುಚ್ಚಿದ್ದರು. ಆನಂತರ ಎಮ್ಎಲ್ಎ ಲಿಂಬಾವಳಿಯನ್ನು ಹೇಮಂತ್ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾರೆ.ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಬ್ಲಾಕ್ ಮೇಲ್ ಪೋಕಸ್ ಟಿವಿ ವ್ಯವಸ್ಥಾಪಕ ಅರೆಸ್ಟ್

“ಮೇ 2018 ರಲ್ಲಿ ಫೇಸ್ಬುಕ್ನಲ್ಲಿ ರಘು ಮೌರ್ಯ ಎಂಬ ವ್ಯಕ್ತಿಯೊಬ್ಬರು ಅಪ್ಲೋಡ್ ಮಾಡಿದ ಎಂಎಲ್ಎ ವಿಡಿಯೋ ಇಟ್ಟುಕೊಂಡು, ಬೇರೆ ಬೇರೆ ಪಕ್ಷದ ರಾಜಕಾರಣಿಗಳು ವಿಡಿಯೋವನ್ನು ಕೇಳುತ್ತಿದ್ದಾರೆ, ಮುಖ್ಯಮಂತ್ರಿ ಕಚೇರಿಯಿಂದ ಸಹ ವಿಡಿಯೋಗೆ ಸಕತ್ ಡಿಮ್ಯಾಂಡ್ ಇದೆ. ಇದು ಇನ್ನಷ್ಟು ಜನರ ಕೈ ತಲುಪ ಬಾರದು ಅಂದರೆ ತನ್ನ ಕೈ ಬಿಸಿ ಮಾಡಿ ಅಂತ ಲಿಂಬಾವಳಿ ಹಿಂದೆ ಬಿದ್ದಿದ್ದನಂತೆ ಹೇಮಂತ್.

ಇದೇ ವಿಚಾರವಾಗಿ ಎಂಎಲ್ಎ ಲಿಂಬಾವಳಿಗೆ ಬೆದರಿಕೆ ಹಾಕಿ, 50 ಲಕ್ಷ ರೂಪಾಯಿ ಪಾವತಿಸಿದ್ದರೆ ತಾನು ವೀಡಿಯೊವನ್ನು ಕೊಡುತ್ತೇನೆ, ಪ್ರೆಸ್ಮೀಟ್ ನಲ್ಲಿ ಇಡುತ್ತೇನೆ ಎಂಬೆಲ್ಲಾ ಬೆದರಿಕೆ ಆಕಿ ಸಧ್ಯ ಈಗ ಪೊಲೀಸರ ಅಥಿತಿಯಾಗಿದ್ದಾನೆ.

ನಷ್ಟದಿಂದ ಮುಚ್ಚಿದ್ದ ಟಿವಿ ವಾಹಿನಿಯನ್ನು ಮತ್ತೆ ತೆರೆಯಲು ಈ ಕುತಂತ್ರಕ್ಕೆ ಮತ್ತು ಶಾಸಕರಿಗೆ ಬೆದರಿಕೆ ಹಾಕಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ದಂಡ ಸಂಹಿತೆಯ 383 (ಅಪರಾಧ ಬೆದರಿಕೆ) ಮತ್ತು 204 (ದಾಖಲೆಗಳ ನಾಶ) ಮತ್ತು ವಿವಿಧ ವಿಭಾಗಗಳ ಅಡಿಯಲ್ಲಿ ಸೆಕ್ಷನ್ 353, 384 (ಸುಲಿಗೆ), 506 ಅಡಿ ಹೇಮಂತ್ ವಿರುದ್ಧ ದೂರು ದಾಖಲಿಸಿರುವ ಪೊಲೀಸರು,ನ್ಯಾಯಾಧೀಶರ ಮುಂದೆ ಹಾಜರುಪಡಿಸಿ. ಪ್ರಸ್ತುತ ತಮ್ಮ ಕಸ್ಟಡಿಯಲ್ಲಿ ಇರಿಸಿದ್ದಾರೆ./////

Web Title : ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಬ್ಲಾಕ್ ಮೇಲ್ “ಪೋಕಸ್ ಟಿವಿ” ವ್ಯವಸ್ಥಾಪಕ ಅರೆಸ್ಟ್ – Focus TV MD Hemanth held for allegedly blackmailing BJP MLA Aravind Limbavali
Read Karnataka News and Updates @ Kannada News Today.

Follow us On

FaceBook Google News

Read More News Today