ತವರಿಂದ ವಾಪಸ್ಸಾಗದ ಪತ್ನಿ, ವಿಷ ಕುಡಿದ ಪತಿ

For wife stupid nature, husband committed suicide

ತವರಿಂದ ವಾಪಸ್ಸಾಗದ ಪತ್ನಿ, ವಿಷ ಕುಡಿದ ಪತಿ – For wife stupid nature, husband committed suicide

ತವರಿಂದ ವಾಪಸ್ಸಾಗದ ಪತ್ನಿ, ವಿಷ ಕುಡಿದ ಪತಿ

ಬೆಂಗಳೂರು : ರಾಜ್ಯಧಾನಿ ಸಿಲಿಕಾನ್ ಸಿಟಿಯಲ್ಲಿ ಆರ್ ಶಂಕರ್ ಮತ್ತು ಲಕ್ಷತಾ ಎಂಬುವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿ ಕುರುಡು ಎಂಬಂತೆ ಪ್ರೀತಿಯಲ್ಲಿ ಬಿದ್ದವರಿಗೆ ಯಾವುದು ಸರಿ ಯಾವುದು ತಪ್ಪೆಂದು ತೋಚದ ಹಾಗೆ ಆಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಪ್ರೀತಿಯಲ್ಲಿ ಬಿದ್ದು ಮದುವೆಯಾಗುವ ದಂಪತಿಗಳಿಗೆ ತಮ್ಮ ಪತ್ನಿ ಸಿಡುಕು ಸ್ವಭಾವ ಪ್ರೀತಿಯಲ್ಲಿ ಬಿದ್ದಾಗ ಕಾಣಿಸಿಕೊಳ್ಳುವುದಿಲ್ಲ. ಹೌದು ಅದೇ ರೀತಿ ಒಂದು ಘಟನೆ ಇಲ್ಲಿ ನಡೆದಿದೆ, ಪತ್ನಿಯ ಹಠದ ಸ್ವಭಾವದಿಂಡ ಬೇಸತ್ತ ಪತಿಯೊಬ್ಬ ಮದುವೆಯಾದ ಕೇವಲ ಇಪ್ಪತ್ತೈದು ದಿನಗಳಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಸಿಲಿಕಾನ್ ಸಿಟಿ ಯ ಹಲಸೂರು ನಿವಾಸಿಯಾಗಿದ್ದ ಆರ್​.ಶಂಕರ್​ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಈತ ಬಿಪಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಇಪ್ಪತ್ತೈದು ದಿನಗಳ ಹಿಂಡಷ್ತೇ ತಾನು ಪ್ರೀತಿಸುತ್ತಿದ್ದ ಲಕ್ಷಿತಾ ಎಂಬ ಯುವತಿಯೊಡನೆ ವಿವಾಹವಾಗಿದ್ದ.

ಸುಮಾರು ಎರಡು ವರ್ಷಗಳಿಂದ ಶಂಕರ್-ಲಕ್ಷಿತಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ವಿವಾಹವಾದ ನಂತರ ಲಕ್ಷಿತಾ ತಾವಿಬ್ಬರೇ ಬೇರೆ ಮನೆ ಮಾಡಬೇಕೆಂದು ಹಠ ಹಿಡಿದ್ದಾಳೆ. ಆಗ ಶಂಕರ ಪತ್ನಿಯ ಬೇಡಿಕೆಯನ್ನು ಮನ್ನಿಸದಿದ್ದ ಕಾರಣ ಆಕೆ ತವರು ಮನೆಗೆ ಹೋಗಿದ್ದು ಮತ್ತೆ ಹಿಂತಿರುಗಿರಲಿಲ್ಲ.

ಶಂಕರ್ ಹಲವಾರು ಬಾರಿ ಲಕ್ಷಿತಾಗೆ ಮನೆಗೆ ಹಿಂತಿರುಗಲು ಕೇಳಿದರೂ ಆಕೆ ಒಪ್ಪಿರಲಿಲ್ಲ. ಬದಲಿಗೆ ಆಕೆ ನಿನ್ನೊಡನೆ ಆದ ವಿವಾಹವನ್ನೇ ಮುರಿದುಕೊಳ್ಳುತ್ತೇನೆ ಎಂದಿದ್ದಳು.

ಆಗ ಶಂಕರ್ ತಾನು ಸಾಯುವುದಕ್ಕೆ ನಿರ್ಧರಿಸಿದ್ದು ವಿಷ ಸೇವಿಸುವ ಮುನ್ನ ತಾನು ತೆಗೆದುಕೊಳ್ಳುತ್ತಿರುವ ವಿಷದ ಬಾಟಲಿಯ ಚಿತ್ರವನ್ನು ಪತ್ನಿ ಲಕ್ಷಿತಾಗೆ ವಾಟ್ಸ್ ಅಪ್ ಮಾಡಿದ್ದಾನೆ. ಹಾಗೂ “ನೀನು ಬಾರದಿದ್ದರೆ ಸಾಯುವುದು ಖಚಿತ” ಎಂದು ಸಂದೇಶ ಕಳಿಸಿದ್ದಾನೆ. ಆದರೆ ಲಕ್ಷಿತಾ ಮಾತ್ರ ಅದಕ್ಕೆ ಕ್ಯಾರೇ ಎಂದಿರಲಿಲ್ಲ. ಇದರಿಂದ ಮನನೊಂದ ಶಂಕರ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪುತ್ರನ ಸಾವಿಗೆ ಸೊಸೆಯೇ ಪ್ರೇರಣೆ ನೀಡಿದ್ದಾಳೆ ಎಂದು ಶಂಕರ್ ತಂದೆ ರಾಜನ್ ಹಲಸೂರು ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೋಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಲಕ್ಶಿತಾ ವಿರುದ್ಧ ಸಹ ದೂರು ಸ್ವೀಕರಿಸಿದ್ದಾರೆ. ಹಲಸೂರು ಠಾಣೆಯ ಪೋಲೀಸರು ತನಿಖೆ ಕೈಗೊಂಡಿದ್ದಾರೆ.////

Web Title : For wife stupid nature, husband committed suicide
(ಕನ್ನಡ ನ್ಯೂಸ್Kannada News Live @ kannadanews.today)