ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ
ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ.
ಬೆಂಗಳೂರು: ಬೆಂಗಳೂರು ಸಿದ್ದಾಪುರ ಪೊಲೀಸರು ಗಸ್ತಿನಲ್ಲಿದ್ದಾಗ ಜಯನಗರ 1ನೇ ಬ್ಲಾಕ್ನ ಬೈರಸಂದ್ರ ಪ್ರದೇಶದಲ್ಲಿ ಸ್ಕೂಟರ್ನಲ್ಲಿ ವ್ಯಕ್ತಿಯೋಬ್ಬನನ್ನು ಹಿಡಿದಿದ್ದಾರೆ. ಸ್ಕೂಟರ್ ನಲ್ಲಿ ಪರೀಕ್ಷೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.
ಆತ ಆ ಮಾದಕ ವಸ್ತು ಮಾರಲು ಕಾಯುತ್ತಿದ್ದ ಎಂಬುದೂ ಗೊತ್ತಾಗಿದೆ. ನಂತರ ಆತನನ್ನು ಬಂಧಿಸಲಾಯಿತು. ವಿಚಾರಣೆಯಲ್ಲಿ ಆತನನ್ನು ಐವರಿಕೋಸ್ಟ್ ಮೂಲದ ಡೇನಿಯಲ್ ಜಾ (ವಯಸ್ಸು 31) ಎಂದು ಗುರುತಿಸಲಾಗಿದೆ. ಡೇನಿಯಲ್ ಬ್ಯುಸಿನೆಸ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು.
ಬಳಿಕ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಆತ ಬೆಂಗಳೂರಿನ ಮಹಿಳೆಯನ್ನು ಮದುವೆಯಾಗಿ ಬಾಣಸವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತನಿಂದ 80 ಸಾವಿರ ರೂ.ಮೌಲ್ಯದ ಎಂ.ಡಿ.ಎಂ.ಎ. ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಡೇನಿಯಲ್ ವಿರುದ್ಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Follow Us on : Google News | Facebook | Twitter | YouTube