ಮಹಿಳಾ ಅಧಿಕಾರಿ ಮೇಲೆ ಹುಲಿ ದಾಳಿ ಮಾಡಿ ಕೊಂದಿದೆ….

ಮಹಾರಾಷ್ಟ್ರ ತಡೋಬಾ ಅಭಯಾರಣ್ಯದಲ್ಲಿ ಮಹಿಳಾ ಅಧಿಕಾರಿ ಮೇಲೆ ಹುಲಿ ದಾಳಿ ನಡೆಸಿ ಕೊಂದಿದೆ...

  • ಮಹಾರಾಷ್ಟ್ರ ತಡೋಬಾ ಅಭಯಾರಣ್ಯದಲ್ಲಿ ಮಹಿಳಾ ಅಧಿಕಾರಿ ಮೇಲೆ ಹುಲಿ ದಾಳಿ ನಡೆಸಿ ಕೊಂದಿದೆ…

ಮುಂಬೈ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಅಭಯಾರಣ್ಯದಲ್ಲಿ ಧಾರುಣ ಘಟನೆ ನಡೆದಿದೆ. ಹುಲಿ ದಾಳಿಗೆ ಅರಣ್ಯ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ.

ಹುಲಿಗಳನ್ನು ಎಣಿಸಲು ಅರಣ್ಯ ಸಿಬ್ಬಂದಿ ಶನಿವಾರ ಬೆಳಗ್ಗೆ ಅಭಯಾರಣ್ಯಕ್ಕೆ ತೆರಳಿದ್ದರು. ಈ ವೇಳೆ ಮಹಿಳಾ ಉದ್ಯೋಗಿಯೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಬಳಿಕ ಪೊದೆಗೆ ಎಳೆದೊಯ್ದು ಕೊಂದಿದೆ… ಉಳಿದ ಅಧಿಕಾರಿಗಳು ಘಟನೆಯ ಬಳಿಕ ಹಿಂದೆ ಸರಿದರು.

ಕಾಡಿನಲ್ಲಿ ಚಲನವಲನವನ್ನು ಗಮನಿಸಿದ ಹುಲಿ, ಮೂವರು ಬೀಟ್ ಹೆಲ್ಪರ್‌ಗಳ ಹಿಂದೆಯೇ ಚಲಿಸುತ್ತಿದ್ದ ಮಹಿಳೆಯ ಹಿಂಬಾಲಿಸಿ ದಾಳಿ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.

ಹುಲಿ ಆಕೆಯನ್ನು ಕಾಡಿನೊಳಗೆ ಎಳೆದೊಯ್ದಿತ್ತು. ತಕ್ಷಣ ಅರಣ್ಯ ಸಿಬ್ಬಂದಿಗಳ ನೆರವಿನಿಂದ ಅಧಿಕಾರಿಗಳ ಶವವನ್ನು ಪತ್ತೆ ಮಾಡಿ ಚಿಮೂರ್ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು.

ಮಗಳು ಮತ್ತು ಆಕೆಯ ಪತಿ ಸೇರಿದಂತೆ ಕುಟುಂಬಕ್ಕೆ ಎಲ್ಲಾ ತಕ್ಷಣದ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಸಿಸಿಎಫ್ ತಿಳಿಸಿದ್ದಾರೆ.