Welcome To Kannada News Today

ಲಾಕ್ ಡೌನ್ ಎಫೆಕ್ಟ್ : ಕಳ್ಳಬಟ್ಟಿ ಮಾರಾಟ, ಮಾರುತ್ತಿದ್ದವರ ಬಂಧನ

Four Accused Arrested For Selling Illegal Liquor

🌐 Kannada News :

ಲಾಕ್ ಡೌನ್ ಆದಾಗಿನಿಂದಲೂ ಅಕ್ರಮ ಮದ್ಯ ಮಾರಾಟ ಹಾಗೂ ಕಳ್ಳಭಟ್ಟಿ  ಸಾರಾಯಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಶಿರಾಳಕೊಪ್ಪದ ಮಳವಳ್ಳಿ ತಾಂಡಾ ಕ್ರಾಸ್ ನಲ್ಲಿ ಕಳ್ಳಭಟ್ಟಿ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಜನರನ್ನ ಬಂಧಿಸಲಾಗಿದ್ದು 2,100 ರೂ. ಮೌಲ್ಯದ 4 ಲೀಟರ್ ಕಳ್ಳಬಟ್ಟಿ ಸಾರಾಯಿ, ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಏ. 16 ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಳವಳ್ಳಿ ತಾಂಡಾ ಕ್ರಾಸ್ ನ ಬಳಿ  1)ಅರುಣ್ ನಾಯ್ಕ (21)  2)ಶಿವಕುಮಾರ (24)  3)ಲೋಕೇಶ್ (35), 4)ಹರೀಶ್  (21) ಎಂಬುವವರು ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ  ಪಿಎಸ್ಐ ಶಿರಾಳಕೊಪ್ಪ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು.

ಆರೋಪಿತರಿಂದ ರೂ 2,100/- ಮೌಲ್ಯದ 4 ಲೀಟರ್ ಕಳ್ಳಭಟ್ಟಿ  ಸಾರಾಯಿಯನ್ನು ಅಮಾನತ್ತು ಪಡಿಸಿಕೊಂಡು  ಶಿರಾಳಕೊಪ್ಪ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತರನ್ನು ಘನ ನ್ಯಾಯಾಲಯಕ್ಕೆ  ಹಾಜರಿ ಪಡಿಸಿದೆ.

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today