Bengaluru Crime, ನಕಲಿ ಆಸ್ತಿ ದಾಖಲೆ ಸೃಷ್ಟಿಸಿದ್ದ ತಂದೆ-ಮಗಳು ಸೇರಿ ನಾಲ್ವರ ಬಂಧನ
ಬೆಂಗಳೂರಿನಲ್ಲಿ ನಕಲಿ ದಾಖಲೆಗಳ ಮೂಲಕ ಹೆಚ್ಚಿನ ಮೌಲ್ಯದ ಆಸ್ತಿ ಮಾರಾಟ ಮಾಡುತ್ತಿದ್ದ ತಂದೆ-ಮಗಳು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (Bengaluru): ಬೆಂಗಳೂರಿನಲ್ಲಿ ನಕಲಿ ದಾಖಲೆಗಳ (Fake Documents) ಮೂಲಕ ಹೆಚ್ಚಿನ ಮೌಲ್ಯದ ಆಸ್ತಿ ಮಾರಾಟ ಮಾಡುತ್ತಿದ್ದ ತಂದೆ-ಮಗಳು ಸೇರಿದಂತೆ ನಾಲ್ವರನ್ನು (4 Arrested) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಡಿವಾಳ ನಿವಾಸಿ ಸುಧಾಕರ ರೆಡ್ಡಿ (37), ಬಾಣಸವಾಡಿ ನಿವಾಸಿ ಅಶೋಕ್ ಕೃಷ್ಣಚೌಹಾಣ್ (44), ಯಶವಂತಪುರ ನಿವಾಸಿ ಕುಮಾರಸ್ವಾಮಿ ಅಲಿಯಾಸ್ ನಕಲಿ ಲಾಲ್ ಜಾಸಿಂಗ್ (54), ಪ್ರಿಯಾ ಕುಮಾರಿ ಅಲಿಯಾಸ್ ನಕಲಿ ಪ್ರಿಯಾ (20) ಎಂದು ಗುರುತಿಸಲಾಗಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಮಾಲೀಕತ್ವದ ನಿವೇಶನವನ್ನು ಮತ್ತೊಬ್ಬರಿಗೆ ಮಾರಾಟ ಮಾಡುತ್ತಿರುವುದನ್ನು ಆಸ್ತಿ ಮಾಲೀಕರು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 11 ಲಕ್ಷ ರೂ.ಗಳನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Four including Father-daughter held for creating fake property documents
Follow us On
Google News |