Welcome To Kannada News Today

Crime News (ದೊಡ್ಡಬಳ್ಳಾಪುರ) : ಮನೆಗೆ ನುಗ್ಗಿ ಕಳ್ಳತನ, ನಂತರ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಯತ್ನ !

ದೊಡ್ಡಬಳ್ಳಾಪುರ ವ್ಯಾಪ್ತಿಯ ರಾಜಾನುಕುಂಟೆಯ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಜೂ.8ರಂದು ಬೆಳಗ್ಗೆ ಕಾರ್ಪೆನ್ಟರ್ ಮನೆಗೆ ನಾಲ್ವರು ಕಳ್ಳರು ಕನ್ನ ಹಾಕಿದ್ದಾರೆ. ಮನೆಯಲ್ಲಿ ಬೆದರಿಸಿ 10 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

ಬೆಂಗಳೂರು (ದೊಡ್ಡಬಳ್ಳಾಪುರ) :  ವ್ಯಾಪ್ತಿಯ ರಾಜಾನುಕುಂಟೆಯ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಜೂ.8ರಂದು ಬೆಳಗ್ಗೆ ಕಾರ್ಪೆನ್ಟರ್ ಮನೆಗೆ ನಾಲ್ವರು ಕಳ್ಳರು ಕನ್ನ ಹಾಕಿದ್ದಾರೆ. ಮನೆಯಲ್ಲಿ ಬೆದರಿಸಿ 10 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

ನಂತರ ಕಣ್ಣಿಗೆ ಬಟ್ಟೆ ಕಟ್ಟಿಕೊಂದಿದ್ದ ಕಳ್ಳರು ಮನೆಯಲ್ಲಿದ್ದ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ. ಆದರೆ ಅವರು ಎಚ್ಚೆತ್ತುಕೊಂಡು ಜೋರಾಗಿ ಕಿರುಚಿಕೊಂಡ ಕಾರಣ ಡಕಾಯಿತರು ಓಡಿಹೋಗಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಇವರಿಂದ 7 ಲಕ್ಷ ಮೌಲ್ಯದ 151 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರಿಗಾಗಿ ತೀವ್ರ ಹುಡುಕಾಟ ನಡೆದಿದೆ.

ಕಳ್ಳರು ಚಾಪೆ ಕೆಳಗೆ ದೂರಲು ಪ್ಲಾನ್ ಮಾಡಿದರೆ, ಪೊಲೀಸರು ರಂಗೋಲಿ ಕೆಳಗೆ ದೂರುವ ಸಾಮರ್ಥ್ಯ ಇರುವವರು, ಘಟನೆಗೆ ತಕ್ಷಣ ಸ್ಪಂದಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.