ಪಕ್ಕದ ಮನೆ ಆಂಟಿ ಸ್ನಾನ ಮಾಡುವ ವಿಡಿಯೋ ಮಾಡಿದ ನವ ವಿವಾಹಿತ, ಆಮೇಲೆ ಆಗಿದ್ದೇನು ?

freshly married young man, Recorded neighbor women bathing Video

[ Kannada News Today ] : Crime News

ಆಂಧ್ರಪ್ರದೇಶ : ಮಹಿಳೆಯರು ಸ್ನಾನ ಮಾಡುವ ಸಂದರ್ಭದಲ್ಲಿ ಕದ್ದು ಮುಚ್ಚಿ ವಿಡಿಯೋ ಮಾಡಿ ಪೈಶಾಚಿಕ ಆನಂದ ಪಡೆಯುವ ದುರ್ಮಾರ್ಗ ಹೆಚ್ಚುತ್ತಲೇ ಇದೆ. ಇಂತಹದ್ದೇ ಒಂದು ಘಟನೆ ಇದೀಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಮದುವೆಯಾಗಿದ್ದ ಯುವಕನೊಬ್ಬ ಇಂದಹದ್ದೇ ಕೃತ್ಯವೆಸಗಿ ಪೋಲೀಸರ ಅಥಿತಿಯಾಗಿದ್ದಾನೆ.

ನೆರೆ ರಾಜ್ಯ ಆಂಧ್ರದ ಕೊಂಡಾಪುರ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಫಣಿಂದರ್  ಎಂಬಾತನೆ ಬಂಧಿತ ಆರೋಪಿ. ಫಣಿಂದರ್ ಎಂಬಿಎ ಮಾಡಿದ್ದ, ಪ್ರೈವೇಟ್ ಕಂಪನಿ ಯಲ್ಲಿ ಅಕೌನ್ಟೆಂಟ್ ಆಗಿ ಕೆಲಸ ಮಾಡಿದ್ದ, ಕೆಲ ದಿನಗಳ ಹಿಂದಷ್ಟೇ ವಿವಾಹವಾಗಿದ್ದ, ಆದರು ಪಕ್ಕದ ಮನೆ ಆಂಟಿ ಸ್ನಾನ ಮಾಡುವುದನ್ನು ನೋಡುವುದು ಇವನ ದಿನನಿತ್ಯದ ಕಾಯಕವಾಗಿತ್ತು.

ಪಣಿಂದರ್ ವಾಸವಿದ್ದ ಮನೆಗೆ ಅಂಟಿಕೊಂಡಂತೆ ಪಕ್ಕದಲ್ಲಿ ಇನ್ನೊಂದು ಮನೆಯಿದೆ, ಬಾಲ್ಕನಿ ಏರಿ ನೋಡಿದರೆ ಪಕ್ಕದ ಮನೆಯ ಬಾತ್ ರೂಮ್ ಕಾಣುತ್ತದೆ, ಈತ ಬಾಲ್ಕನಿಯಲ್ಲಿ ಅಳವಡಿಸಿದ್ದ ಎಗ್ಜಾಸ್ಟ್ ಪ್ಯಾನ್ ರಂಧ್ರದಿಂದ ಪಕ್ಕದ ಮನೆ ಆಂಟಿ ಸ್ನಾನ ಮಾಡುವುದನ್ನು ನೋಡುತ್ತಿದ್ದನು.

ಅಷ್ಟೇ ಅಲ್ಲದೆ, ಸ್ನಾನ ಮಾಡುವುದನ್ನು ತನ್ನ ಸೆಲ್ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡು ವಿಕೃತ ಆನಂದ ಪಡೆಯುತ್ತಿದ್ದನು, ಆದರೆ ಟೈಮ್ ಯಾವಾಗಲೂ ಒಂದೇ ರೀತಿ ಇರೋದಿಲ್ಲವಲ್ಲ, ಎರಡು ದಿನಗಳ ಹಿಂದೆ ಇದೆ ರೀತಿ ವಿಡಿಯೋ ಚಿತ್ರಿಸುವಾಗ ಈತ ಆಂಟಿ ಕಣ್ಣಿಗೆ ಬಿದ್ದಿದ್ದಾನೆ.

ತಕ್ಷಣ ಆಂಟಿ ಪೊಲೀಸರಿಗೆ ವಿಷಯ ತಿಳಿಸಿ, ಸಧ್ಯ ಪೊಲೀಸರು ಅವನ ಸೆಲ್ ಫೋನ್ ವಶಕ್ಕೆ ಪಡೆದು, ರಿಮಾಂಡ್ ಗೆ ಕಳುಹಿಸಿದ್ದಾರೆ.

Web Title : freshly married young man, Recorded neighbor women bathing Video
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube ಅನುಸರಿಸಿ.