Amazon : ಅಮೆಜಾನ್‌ ನಲ್ಲಿ 70,000 ಮೌಲ್ಯದ ಫೋನ್ ಆರ್ಡರ್ ಮಾಡಿದರೆ, ಬಂದಿದ್ದು ಸೋಪ್

Amazon : ನೀವು ಆನ್‌ಲೈನ್‌ನಲ್ಲಿ ಏನನ್ನಾದರೂ ಖರೀದಿಸುತ್ತಿದ್ದೀರಾ? ಆದರೇ ಜಾಗರೂಕರಾಗಿರಿ. ಅದರ ನಂತರ ನರಳಿದರೂ ಪ್ರಯೋಜನವಾಗದಿರಬಹುದು. ಏಕೆಂದರೆ, ಈ ಇಕಾಮರ್ಸ್ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ದೊಡ್ಡ ದೊಡ್ಡ ಶಾಕ್‌ಗಳನ್ನು ನೀಡುತ್ತಿವೆ.

ನಾವು ಒಂದನ್ನು ಆರ್ಡರ್ ಮಾಡಿದರೆ ಇನ್ನೊಂದನ್ನು ಕೈ ಸೇರುತ್ತದೆ. ಆರ್ಡರ್ ತೆರೆದು ನೋಡಿದರೆ ಅದರಲ್ಲಿ ಸಾಬೂನುಗಳು, ಕಲ್ಲುಗಳು ಮತ್ತು ಇಟ್ಟಿಗೆಗಳು ನಿಮಗೆ ಶಾಕ್ ನೀಡಬಹುದು.

ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ ವ್ಯಕ್ತಿಯೊಬ್ಬ ಫೋನ್ ಆರ್ಡರ್ ಮಾಡಿದರೆ ಸೋಪ್‌ ಬಂದದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಕ್ಸ್ ಆರ್ಡರ್ ಮಾಡಿದರೆ ಮತ್ತೊಬ್ಬರಿಗೆ ಬ್ರಾ ಕಳಿಸಿ ಶಾಕ್ ಕೊಟ್ಟಿದ್ದಾರೆ. ಇವುಗಳನ್ನು ಮರೆಯುವ ಮುನ್ನವೇ ಇಂತಹ ಇನ್ನೊಂದು ಘಟನೆ ನಡೆದಿದೆ.

ಕೇರಳದ ಕೊಚ್ಚಿ ಮೂಲದ ನೂರುಲ್ ಅಮೀನ್ ಅವರು ಅಕ್ಟೋಬರ್ 12 ರಂದು ಅಮೆಜಾನ್ ನಲ್ಲಿ ರೂ. 70,900 ಬೆಲೆಯ ಐಫೋನ್ 12 ಅನ್ನು ಆರ್ಡರ್ ಮಾಡಿದರು. ಅವರು ಅಮೆಜಾನ್ ಪೇ ಕಾರ್ಡ್‌ನೊಂದಿಗೆ ಬಿಲ್ ಕಟ್ಟಿದರು.

ಆರ್ಡರ್ ಪ್ಯಾಕ್ ಅಕ್ಟೋಬರ್ 15 ರಂದು ಬಂತು. ಅವರು ಅದನ್ನು ಉತ್ಸಾಹದಿಂದ ತೆರೆದರು .. ತೀರಾ ನೋಡಿ ಗಾಬರಿಯಾದರು. ಕಾರಣ ಒಳಗೆ ಸಾಬೂನು (ಡಿಶ್ ವಾಶ್ ಬಾರ್) ರೂಪಾಯಿ ಮತ್ತು 5 ರೂಪಾಯಿ ನಾಣ್ಯ ಇತ್ತು. ಸದ್ಯ ಆತ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.