Welcome To Kannada News Today

ಸಹೋದರನನ್ನು ಬಾವಿಗೆ ತಳ್ಳಿ ಯುವತಿ ಮೇಲೆ ಮೂವರು ಅಪ್ರಾಪ್ತರು ಸೇರಿ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರ

Gang of seven rapes teen after throwing brother into well in Madhya Pradesh

🌐 Kannada News :

ಸಹೋದರನನ್ನು ಬಾವಿಗೆ ತಳ್ಳಿ ಹದಿನೆಂಟು ವರ್ಷದ ಯುವತಿ ಮೇಲೆ ಅಪ್ರಾಪ್ತ ಬಾಲಕ ಸೇರಿ ಏಳು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಆಕೆ ತನ್ನ ಸಹೋದರನ ಜೊತೆ ಬುಧವಾರ ರಾತ್ರಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಏಪ್ರಿಲ್ 29-30ರಂದು ಈ ಘಟನೆ ನಡೆದಿದ್ದು, ಅತ್ಯಾಚಾರಕ್ಕೂ ಮುನ್ನ ಆಕೆಯ ಸಹೋದರನನ್ನು ಬಾವಿಗೆ ಎಸೆದ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಸಧ್ಯ ಘಟನೆಯ ಸಂಬಂಧ ಐವರು ಶಂಕಿತರನ್ನು ಬಂಧಿಸಲಾಗಿದ್ದು, ಅವರಲ್ಲಿ ಮೂವರು ಅಪ್ರಾಪ್ತ ವಯಸ್ಕರು ಎಂಬ ಮಾಹಿತಿ ಸಿಕ್ಕಿದೆ. ಲಾಕ್ ಡೌನ್ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಲ್ಲಿ ಇದು ನಾಲ್ಕನೇ ಅತ್ಯಾಚಾರ ಪ್ರಕರಣ ಎಂಬುದು ಬೆಚ್ಚಿ ಬೀಳುವ ಸಂಗತಿ.

ನಾಲ್ಕು ಗಂಟೆಗಳಿಗೂ ಹೆಚ್ಚುಕಾಲ ಯುವತಿ ಮೇಲೆ ಅತ್ಯಾಚಾರ ಎಸಗಿದ ಧುರುಳರು ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ,  ಸಹೋದರ ಸಹೋದರ ಸಹಾಯಕ್ಕಾಗಿ ಕೂಗುತ್ತಾ, ಚೀರುತ್ತಿದ್ದರು ಯಾವುದೇ ಪ್ರಯೋಜನ ಆಗಲಿಲ್ಲ. ಕಾರಣ ಲಾಕ್ ಡೌನ್ ನ ಈ ದಿನಗಳಲ್ಲಿ ರಸ್ತೆಗಳು ನಿರ್ಜನವಾಗಿದ್ದರಿಂದ, ಅವನ ಕೂಗು ಕೇಳಲು ಅಲ್ಲಿ ಯಾರೂ ಇರಲಿಲ್ಲ.

ಪೊಲೀಸರು ಮೂರು ಅಪ್ರಾಪ್ತ ಬಾಲಕರು ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಕಣ್ಮರೆಯಾಗಿದ್ದಾರೆ. ಯುವತಿ ತನ್ನ ಸಹೋದರನ ಜೊತೆಗೆ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಳು. ರಾತ್ರಿ 8.30ರ ಸುಮಾರಿಗೆ ಬೈಕ್‌ ತಡೆದು ನಿಲ್ಲಿಸಿದ ಆರೋಪಿಗಳು ಆಕೆಯ ಸಹೋದರನನ್ನು ತಳ್ಳಿ ಆಕೆಯನ್ನು ಎಳೆದುಕೊಂಡು ಹೋಗಿದ್ದರು. ಮಧ್ಯರಾತ್ರಿ 2 ಗಂಟೆಯವರೆಗೂ  ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾರೆ.

ರಾತ್ರಿ 9 ಗಂಟೆ ಸುಮಾರಿಗೆ ಗ್ಯಾಂಗ್ ಬಾಲಕಿಯನ್ನು ಬಲವಂತವಾಗಿ ಬೈಕ್‌ಗಳಲ್ಲಿ 400 ಮೀಟರ್ ದೂರದಲ್ಲಿರುವ ಕಾಡಿನತ್ತ ಕರೆದೊಯ್ದಿದೆ ಎಂದು ತಿಳಿದುಬಂದಿದೆ. ಮುಂದಿನ ನಾಲ್ಕು ಗಂಟೆಗಳ ಕಾಲ ಅವಳು ಅವರ ಸೆರೆಯಲ್ಲಿದ್ದಳು. ಮುಂಜಾನೆ 1 ಗಂಟೆ ಸುಮಾರಿಗೆ ಆಕೆಯ ಸಹೋದರ ಬಾವಿಯಿಂದ ಹೊರಬರಲು ಯಶಸ್ವಿಯಾದನು ಮತ್ತು ಕಾಮುಕರು ತನ್ನ ಸಹೋದರಿಯನ್ನು ಎಲ್ಲಿಗೆ ಕರೆದೊಯ್ದಿದ್ದಾರೆಂದು ತಿಳಿಯದೆ, ಸಹಾಯ ಪಡೆಯಲು ರಸ್ತೆಯ ಕಡೆಗೆ ಸಾಗಿದ್ದಾನೆ.

ಅಷ್ಟೊತ್ತಿಗೆ ಇವರನ್ನು ಹುಡುಕುತ್ತಾ ಬಂದ ಹಳ್ಳಿಯವರಿಗೆ ನಡೆದ ವಿಷಯನ್ನು ಹೇಳಿದ್ದಾನೆ, ವಿಷಯ ಕೇಳಿದ ಜನರು ಗಾಬರಿಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಅತ್ಯಾಚಾರದ ಬಳಿಕ ಅತ್ಯಾಚಾರಿಗಳು ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ, ಬಳಿಕ ಮನೆಗೆ ತೆರಳಿ ಮರುದಿನ ಬೆಳಗ್ಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐವರನ್ನು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.