ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ, ಮೈಸೂರಲ್ಲಿ ಘಟನೆ

ನಗರದಲ್ಲಿ ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ಯುವತಿಯೊಬ್ಬಳನ್ನು ಇರಿದು ಪರಾರಿಯಾಗಿದ್ದಾನೆ - Girl stabbed for rejecting proposal in Mysore

🌐 Kannada News :

ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ, ಮೈಸೂರಲ್ಲಿ ಘಟನೆ

( Kannada News Today ) : ಮೈಸೂರು: ಮೀಸೆ ಚಿಗುರುವೆ ಮೊದಲೇ ಪ್ರೀತಿ, ಪ್ರೇಮ, ಪ್ರೀತ್ಸೆ ಅಂತ ಸುತ್ತಾಡೋ ರೋಮಿಯೊಗಳು ಅವರ ಆ ವಯಸ್ಸಿಗೆ ಅದು ಆಕರ್ಷಣೆ ಮಾತ್ರ ಎಂದು ತಿಳಿಯದೆ, ಅಪ್ಪಂದೋ ಅಣ್ಣಂದೋ ಬೈಕ್ ಎತ್ತಾಕ್ಕೊಂಡ್ ಸಿಕ್ಕ ಸಿಕ್ಕ ಹುಡ್ಗಿರ ಹಿಂದೆ ಸುತ್ತೋದಲ್ದೆ” ನೀನು ಇಷ್ಟ ಇಲ್ಲ ಕಣೋ ಮೂದೇವಿ” ಅಂದ್ರೂ ಹಠಕ್ಕೆ ಬೀಳುತ್ತಾರೆ.

ಇನ್ನೊಂದು ಹೆಜ್ಜೆ ಮುಂದೆ ಹೋಗಿ ನನ್ನನ್ನೇ ಇಷ್ಟ ಇಲ್ಲ ಅಂತೀಯಾ ಮಾಡ್ತೀನಿ ತಡಿ ಅಂತ, ಆ ಯುವತಿಗೆ ಕೇಡು ಬಯಸುತ್ತಾನೆ, ಆಗಾದ್ರೆ ಇದೇನಾ ಪ್ರೀತಿ ?

ಇಂತಹದ್ದೇ ಘಟನೆ ಮೈಸೂರಿನಲ್ಲಿ ನಡೆದಿದೆ, ಪ್ರೇಮ ವೈಫಲ್ಯದಿಂದ ಮೈಸೂರಲ್ಲಿ ಭಗ್ನ ಪ್ರೇಮಿಯೊಬ್ಬ ಯುವತಿಗೆ ಚಾಕು ಇರಿದಿದ್ದಾನೆ.

ಈ ಸುದ್ದಿ ಓದಿ : ತಾಯಿ ಚಿಕಿತ್ಸೆಗೆ ಕೂಡಿಟ್ಟಿದ್ದ ಹಣ ದರೋಡೆ ಮಾಡಿದ ಕಿರಾತಕರು

ಹೌದು, ನಗರದಲ್ಲಿ ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ಯುವತಿಯೊಬ್ಬಳನ್ನು ಇರಿದು ಪರಾರಿಯಾಗಿದ್ದಾನೆ.

ನಗರದ ಕೆ.ಆರ್. ಮೊಹಲ್ಲಾದ ದಿವಾನ್ ರಸ್ತೆಯಲ್ಲಿರುವ ಮನೆಯ ಮುಂದೆ ನಿಂತಿದ್ದ ಅಶ್ವಿನಿ (19) ಎಂಬ ಯುವತಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಯುವಕ ಗಗನ್ ಅಲಿಯಾಸ್ ಕೆಂಚ ಎನ್ನಲಾಗಿದೆ.

ಅಶ್ವಿನಿಯನ್ನು ಕೂಡಲೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣವನ್ನು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

Web Title : Girl stabbed for rejecting proposal in Mysore

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.