ದಿಢೀರ್ ಬ್ರೇಕ್ ಹಾಕಿದ ಲೋಕೋಪೈಲಟ್.. ಹಳಿತಪ್ಪಿದ ಗೂಡ್ಸ್ ರೈಲು
ಅಮೃತಸರ: ಪಂಜಾಬ್ ನಲ್ಲಿ ಭಾನುವಾರ ರಾತ್ರಿ ಗೂಡ್ಸ್ ರೈಲು ಹಳಿತಪ್ಪಿದೆ. ರೂಪನಗರದಲ್ಲಿ ದನಗಳ ಹಿಂಡು ಹಳಿಗಳ ಮೇಲೆ ಬಂದಾಗ ಲೊಕೊ ಪೈಲಟ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದರು. ಇದರಿಂದ 16 ಬೋಗಿಗಳು ಹಳಿತಪ್ಪಿವೆ. ಥರ್ಮಲ್ ಪ್ಲಾಂಟ್‌ನಿಂದ ರೋಪರ್ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ರೂಪನಗರ ಮಾರ್ಗದ ಹಲವು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಅಷ್ಟರಲ್ಲಿ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಳಿತಪ್ಪಿದ ಬೋಗಿಗಳನ್ನು ಹೊರ ತೆಗೆದಿದ್ದಾರೆ. ಒಂದರ ಮೇಲೊಂದರಂತೆ ಬಿದ್ದಿದ್ದರಿಂದ ಪ್ರಕ್ರಿಯೆ ಸ್ವಲ್ಪ ತಡವಾಗಿತ್ತು. ಸೋಮವಾರ ಸಂಜೆಯ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾದರ್-ಪುದುಚೇರಿ ಎಕ್ಸ್‌ಪ್ರೆಸ್ ಶುಕ್ರವಾರ ರಾತ್ರಿ ಹಳಿತಪ್ಪಿತ್ತು. ದಾದರ್‌ನಿಂದ ಪುದುಚೇರಿಗೆ ಹೊರಟಿದ್ದ ರೈಲು ಮುಂಬೈನ ಮಾಟುಂಗಾ ನಿಲ್ದಾಣದಲ್ಲಿ ಎದುರಿಗೆ ಬರುತ್ತಿದ್ದ ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಆದರೆ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ.
Goods Train Derailed In Punjabs Rupnagar