ವಿವಾಹ ಪೂರ್ವ ಫೋಟೋಶೂಟ್ ಸಮಯದಲ್ಲಿ ವಧು-ವರನ ಸಾವು

ವಧು-ವರರು ತಲಾಕಾಡಿನಲ್ಲಿ ನಡೆದ ವಿವಾಹ ಪೂರ್ವ ಫೋಟೋಶೂಟ್‌ ವೇಳೆ ತೆಪ್ಪ ಮುಳುಗಿ ದುರಂತ ಸಾವು. ಅಗ್ನಿಶಾಮಕ ದಳದ ಸಹಾಯದಿಂದ ಮೃತರ ಶವಗಳನ್ನು ಎತ್ತಲಾಯಿತು.

🌐 Kannada News :

ವಿವಾಹ ಪೂರ್ವ ಫೋಟೋಶೂಟ್ ಸಮಯದಲ್ಲಿ ವಧು-ವರನ ಸಾವು

( Kannada News Today ) : ಮೈಸೂರು : ವಿವಾಹ ಪೂರ್ವ ಫೋಟೋಶೂಟ್ ಸಮಯದಲ್ಲಿ ವಧು-ವರನ ಸಾವು ಸಂಭವಿಸಿದೆ, ಹೌದು ಪ್ರಿ ವೆಡ್ಡಿಂಗ್ ಫೋಟೋಶೂಟ್​ ವೇಳೆ ಈ ದುರಂತ ನಡೆದಿದ್ದು ಮದುವೆಗೂ ಮುನ್ನ ವಧು-ವರ ಮಸಣ ಸೇರಿದ್ದಾರೆ.

ವಧು-ವರ ತಲಾಕಾಡಿನಲ್ಲಿ ನಡೆದ ವಿವಾಹ ಪೂರ್ವ ಫೋಟೋಶೂಟ್‌ನಲ್ಲಿ ತೊಡಗಿದ್ದರು. ಮೃತರು ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ವಧು ಶಶಿಕಲಾ ಮತ್ತು ವರ ಚಂದ್ರು ಎನ್ನಲಾಗಿದೆ.

ತಾಲೂಕಾಡಿನ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ನಿಂತಿದ್ದಾಗ ಅಯತಪ್ಪಿ ಶಶಿಕಲಾ ನದಿಗೆ ಬಿದ್ದಿದ್ದಾರೆ, ಆ ಸಮಯ ಚಂದ್ರು ಶಶಿಕಲಾಳನ್ನು ಹಿಡಿಯಲು ಹೋಗಿ ತಾನೂ ನದಿಗೆ ಬಿದ್ದಿದ್ದಾನೆ.

ಈಜು ಬಾರದ ಇಬ್ಬರು ಅಸುನೀಗಿದ್ದಾರೆ, ಮೃತರ ಶವಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಿಂದ ಮೇಲಕ್ಕೆ ಎತ್ತಿದ್ದಾರೆ. ನವೆಂಬರ್ 22 ರಂದು ಮದುವೆಯಾಗಬೇಕಿದ್ದ ಚಂದ್ರು ಶಶಿಕಲಾ ಅವರ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.