ಡಬಲ್ ಮರ್ಡರ್: ಪತ್ನಿಗೆ ಕಿರುಕುಳ ಕೊಟ್ಟವರ ಕೊಂದ ಪತಿ

ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಮಹಿಳೆಗೆ ಕಿರುಕುಳ ನೀಡಿದ್ದಕ್ಕೆ ಇಬ್ಬರನ್ನು ಆಕೆಯ ಪತಿ ಕೊಂದಿದ್ದಾನೆ.

ಡಬಲ್ ಮರ್ಡರ್: ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಮಹಿಳೆಗೆ ಕಿರುಕುಳ ನೀಡಿದ್ದಕ್ಕೆ ಇಬ್ಬರನ್ನು ಆಕೆಯ ಪತಿ ಕೊಂದಿದ್ದಾನೆ. ಮೈಸೂರು ನಗರದ ಬೋಗಾದಿ ರಸ್ತೆಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ರವಿ (28) ಮತ್ತು ಬಸವ (30) ಎಂಬ ಇಬ್ಬರು ಮದ್ಯವ್ಯಸನಿಗಳು ರಾತ್ರಿ ವೇಳೆ ರಸ್ತೆಗಳಲ್ಲಿ ಸಂಚರಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರು. ಶನಿವಾರ ರಾತ್ರಿಯೂ ಕುಡಿದ ಮತ್ತಿನಲ್ಲಿದ್ದ ರವಿ, ಬಸವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

ಆದರೆ, ಈ ಹಿಂದೆಯೂ ಇದೇ ಮಹಿಳೆಯೊಂದಿಗೆ ಇಬ್ಬರೂ ಅಸಭ್ಯವಾಗಿ ವರ್ತಿಸಿದ್ದರು. ಅವರಿಂದ ತಪ್ಪಿಸಿಕೊಂಡು ಬಂದ ಮಹಿಳೆ ನಡೆದ ವಿಚಾರವನ್ನು ಪತಿಗೆ ತಿಳಿಸಿದ್ದಾಳೆ. ಇದರೊಂದಿಗೆ ಆಕೆಯ ಪತಿ ಮಹೇಶ್ ತನ್ನ ಸ್ನೇಹಿತನೊಂದಿಗೆ ಬಂದು ರವಿ ಹಾಗೂ ಬಸವನನ್ನು ಹತ್ಯೆ ಮಾಡಿದ್ದಾನೆ. ಕೊಲೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮೃತರು ಹೆಚ್.ಡಿ.ಕೋಟೆ ಬಳಿಯ ಗ್ರಾಮದವರಾಗಿದ್ದು, ಇಬ್ಬರೂ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿಂದೆಯೂ ಹಲವು ಮಹಿಳೆಯರು ಪೊಲೀಸರಿಗೆ ಇವರ ಬಗ್ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Stay updated with us for all News in Kannada at Facebook | Twitter
Scroll Down To More News Today