ಮಹಿಳಾ ಕಾನ್‌ಸ್ಟೆಬಲ್‌ ಗೆ ಸೆಕ್ಸ್ ವಿಡಿಯೋ, ಬೆತ್ತಲೆ ವಾಟ್ಸಪ್ ಮಾಡಿದ ಭೂಪ ಅರೆಸ್ಟ್

Harassment of Woman Constable, The police arrested the accused

ಕನ್ನಡ ನ್ಯೂಸ್ ಟುಡೇCrime News

ವಾರೆವ್ವಾ … ಮಹಿಳೆಯರಿಗೆ ಮಾನಸಿಕ ಕಿರುಕುಳ, ಲೈಂಗಿಕ ಕಿರುಕುಳ ನೀಡುವ ಬಗ್ಗೆ ನಾವೆಲ್ಲ ಕೇಳಿದ್ದೇವೆ, ಓದಿದ್ದೇವೆ. ಮಹಿಳೆಯರಿಗೆ ಕಿರುಕುಳ ನೀಡಿ ಅಶ್ಲೀಲ ಸಂದೇಶ ಕಳುಹಿಸಿ ಪೋಲೀಸರ ಅಥಿತಿಯಾದ ಅನೇಕ ಪ್ರಕರಣಗಳೂ ಇವೆ.

ಆದರೆ ಇಲ್ಲೊಬ್ಬ, ಇದಕ್ಕೂ ಒಂದೆಜ್ಜೆ ಮುಂದೆ ಬಂದು, ನೇರವಾಗಿ ಪೊಲೀಸ್ ಕಾನ್‌ಸ್ಟೆಬಲ್‌ ಗೆ ಅಶ್ಲೀಲ ಸಂದೇಶಗಳು, ಬೆತ್ತಲೆ ಫೋಟೋಗಳು, ವಿಡಿಯೋಗಳನ್ನು ಕಳುಹಿಸಿದ್ದಾನೆ.

ಈ ಬಗ್ಗೆ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಭಾಸ್ಕರ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಪ್ರಮುಖ ಅಂಶಗಳು ಹೊರಬಿದ್ದಿವೆ. ಅಶ್ಲೀಲ ವಿಡಿಯೋಗಳನ್ನು ಕಳುಹಿಸುವುದು, ಬೆತ್ತಲೆ ವಾಟ್ಸಾಪ್ ವಿಡಿಯೋ ಕರೆಗಳು ಮಾಡುವುದು, ಲೈಂಗಿಕ ಕಿರುಕುಳ, ಜೊತೆಗೆ ಮಹಿಳಾ ಕಾನ್‌ಸ್ಟೆಬಲ್‌ಗೆ ಕಿರುಕುಳ ನೀಡಲಾಗಿದೆ ಎಂದು ವರದಿಯಾಗಿದೆ. 

ಭಾಸ್ಕರ್ MCOM ಅಧ್ಯಯನ ಮಾಡಿದ್ದಾನೆ ಮತ್ತು ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಯಾಗಿ ಕೆಲವು ಕಾಲ ಕೆಲಸ ಸಹ ಮಾಡಿದ್ದನು. ಆ ಸಮಯದಲ್ಲಿ ಸರ್ಕಾರಿ ಪೋರ್ಟಲ್‌ಗಳಿಂದ ಪಡೆದ ಫೋನ್ ಸಂಖ್ಯೆಗಳನ್ನು ಸಂಗ್ರಹಿಸಿ ಮಹಿಳೆಯರಿಗೆ ಕಿರುಕುಳ ನೀಡಲು ಪ್ರಾರಂಭಿಸಿದನು..

ಇದೆ ರೀತಿ ಅನೇಕ ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆಂದು ತಿಳಿದುಬಂದಿದೆ. ಹಲವು ಹೊಸ ಸಿಮ್‌ಗಳನ್ನು ಖರೀದಿಸಿದ್ದ ಆತ ಸ್ವಲ್ಪ ದಿನದ ಬಳಿಕ ಆ ಸಿಮ್ ಉಪಯೋಗಿಸುತ್ತಿರಲಿಲ್ಲ, ಬದಲಾಗಿ ಹೊಸ ಸಿಮ್ ಖರೀದಿಸುತ್ತಿದ್ದ. 100 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನು ಕಳುಹಿಸುವ ಮೂಲಕ ಕಾನ್‌ಸ್ಟೆಬಲ್‌ಗೆ ಕಿರುಕುಳ ನೀಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಆತನನ್ನು ಸೈಬರ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.. 

Web Title : Harassment of Woman Constable, The police arrested the accused
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.