ಬುರ್ಖಾ ಧರಿಸಿದ್ದ ಹಿಂದೂ ಯುವತಿಯ ಮೇಲೆ ಹಲ್ಲೆ

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಇಬ್ಬರು ಪುಂಡರು ಹಿಂದೂ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆ ಹಿಂದೂ ಆಗಿದ್ದು ಮುಸ್ಲಿಂ ಹುಡುಗಿಯಂತೆ ಬುರ್ಖಾ ಧರಿಸಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಇಬ್ಬರು ಪುಂಡರು ಹಿಂದೂ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆ ಹಿಂದೂ ಆಗಿದ್ದು ಮುಸ್ಲಿಂ ಹುಡುಗಿಯಂತೆ ಬುರ್ಖಾ ಧರಿಸಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ನೆರೆಮನೆಯ ವ್ಯಕ್ತಿ ಘಟನೆಯ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ.

ವಿಡಿಯೋ ವೈರಲ್ ಆಗಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಸಂತ್ರಸ್ತೆಯನ್ನು ವಿಚಾರಣೆ ನಡೆಸಿದಾಗ, ಆಕೆ ತನ್ನ ಸ್ನೇಹಿತರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಯುವಕರು ಬಂದು ಆಕೆ ಹಿಂದೂ ಎಂದು ತಿಳಿದಾಗ ಆಕೆಯ ಬುರ್ಖಾವನ್ನು ತೆಗೆದು ಥಳಿಸಿದ್ದಾರೆ. ಆದರೆ ಈ ಬಗ್ಗೆ ದೂರು ನೀಡಿದರೆ ಪೋಷಕರಿಗೆ ಗೊತ್ತಾಗುತ್ತದೆ ಎಂಬ ಭಯದಿಂದ ಪೊಲೀಸರ ಬಳಿ ಬಂದಿಲ್ಲ ಎಂದು ಹೇಳಿದ್ದಾಳೆ.

ದೂರು ಸ್ವೀಕರಿಸದಿದ್ದರೂ ಮತ್ತೆ ತಪ್ಪು ಮಾಡಬಾರದು ಎಂಬ ಉದ್ದೇಶದಿಂದ ದುಷ್ಕರ್ಮಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today