ಕ್ಷುಲ್ಲಕ ಕಾರಣಕ್ಕೆ ಭೀಕರ ಕೊಲೆ, ಬೆಂಗಳೂರಿನಲ್ಲಿ ಘಟನೆ

horrific murder of Hotel owner in Bangalore

ಕ್ಷುಲ್ಲಕ ಕಾರಣಕ್ಕೆ ಭೀಕರ ಕೊಲೆ, ಬೆಂಗಳೂರಿನಲ್ಲಿ ಘಟನೆ

ಜೀವನ ಸಾಗಿಸೋಕೆ ಹೋಟೆಲ್ ನಡೆಸಿ ಹೇಗೋ ತಮ್ಮ ಜೀವನ ನಿರ್ವಹಿಸುತ್ತಿದ್ದ ಮಂಡ್ಯ ಮೂಲದ ದಂಪತಿಗಳ ಮೇಲೆ ಕ್ರೂರಿ ವಿಧಿಯ ಕಣ್ಣು ಬಿದ್ದಂತಿದೆ. ಎಂದಿನಂತೆ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದ ದಂಪತಿಗೆ ನೆನ್ನೆಯ ದಿನ ಮಾಮೂಲಿನದ್ದಾಗಿರಲಿಲ್ಲ, ಸರಿ ಸುಮಾರು ರಾತ್ರಿ ಹತ್ತು ಗಂಟೆಗೆ ಹೋಟೆಲ್ ಬಳಿ ಬಂದ ಚಿಲ್ಲರೆ ಪುಡಿ ರೌಡಿಗಳು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ

ರಾಜಗೋಪಾಲನಗರದಲ್ಲಿ ಈ ಒಂದು ಘಟನೆ ನಡೆದಿದ್ದು ಹೋಟೆಲ್ ಮಾಲೀಕನನ್ನು ಡ್ಯಾಗರ್ ನಿಂದ ಚುಚ್ಚಿ ಚುಚ್ಚಿ ಕೊಂದಿದ್ದಾರೆ, ತನ್ನ ಕಣ್ಣ ಮುಂದೆಯೇ ಪತಿ ಸಾವು ಬದುಕಿನ ಕೊನೆಯ ಉಸಿರು ಎಳೆಯುತ್ತಿದ್ದರೆ, ನಿಸ್ಸಹಾಯಕಳಾದ ಪತ್ನಿ ದಾರಿಹೋಕರನ್ನು ” ಸಾರ್, ನನ್ನ ಗಂಡ ಮಾತಾಡ್ತಾ ಇಲ್ಲ, ಸ್ವಲ್ಪ ನೋಡಿ ಸಾರ್, ಸಾರ್ ನನ್ನ ಗಂಡ ಸತ್ತೋಗಿದ್ದಾರೆ ಅನ್ಸುತ್ತೆ, ನನಗೆ ನನ್ನ ಗಂಡ ಬೇಕು ಸಾರ್, ಸಾರ್ ಅವರನ್ನು ಎಬ್ಬಿಸಿ ಸಾರ್ ಎಂದು ಗೋಳಾಡುತ್ತಿದ್ದ ಆಕೆಯ ಸ್ಥಿತಿ ಕಂಡು ಎಂತಹ ಕ್ರೂರಿಗಳ ಕಣ್ಣು ಸಹ ನೀರು ತುಂಬಿ ಕೊಳ್ಳುತ್ತವೆ.

ಸಧ್ಯ ಪ್ರಕರಣ ದಾಖಲಿಸಿರುವ ಪೊಲೀಸರು, ಕೊಲೆಗಾರರ ಸುಳಿವಿಗೆ ಬಲೇ ಬೀಸಿದ್ದಾರೆ, ಇದೊಂದು ಕುಡಿದ ನಶೆಯಲ್ಲಿ ನಡೆದಿರಬಹುದಾದ ಕೊಲೆಯೆಂದು ಅಭಿಪ್ರಾಯ ಪಡಲಾಗಿದ್ದು, ದುಷ್ಕರ್ಮಿಗಳ ಕ್ರೂರ ಕೃತ್ಯಕ್ಕೆ ನೆಮ್ಮದಿಯ ಬದುಕು ನಡೆಸಿದ್ದ ಒಂದು ಕುಟುಂಬ ನರಳುವಂತಾಗಿದೆ.

ಕ್ಷುಲ್ಲಕ ಕಾರಣಕ್ಕೆ ಭೀಕರ ಕೊಲೆ, ಬೆಂಗಳೂರಿನಲ್ಲಿ ಘಟನೆ - Kannada News

ಆದಷ್ಟು ಬೇಗ ಪೊಲೀಸರು ಚಿಲ್ಲರೆ ರೌಡಿಗಳನ್ನು ಬಂಧಿಸಿ, ತಕ್ಕ ಶಿಕ್ಷೆ ನೀಡಲಿ. ನೆನ್ನೆಯಷ್ಟೇ ಅಪರಿಚಿತನನ್ನು ಕೊಂದು ರಸ್ತೆ ಬದಿಯಲ್ಲಿ ಎಸೆಯಲಾಗಿತ್ತು, ಇದು ಎರಡು ದಿನದಲ್ಲಿ ನಡೆದ ಎರಡನೇ ಪ್ರಕರಣ. ಹೆಚ್ಚುತ್ತಿರುವ ಪುಂಡರ ಉಪಟಳ ಮುರಿಯಲು ಪೊಲೀಸರು ಆದಷ್ಟು ಬೇಗ ಮುಂದಾಗಬೇಕು..////

Web Title : horrific murder of Hotel owner in Bangalore
(Get Latest Kannada News Live Alerts @ kannadanews.today)

Follow us On

FaceBook Google News

Read More News Today