ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ
Husband Commits Suicide For Wife's Illegal Relationship
[story-lines]
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ
ಕೊಳ್ಳೇಗಾಲ -ತಾಲೂಕಿನ ತಿಮ್ಮಾರಾಜಿಪುರ ಗ್ರಾಮದಲ್ಲಿ ಪತ್ನಿಯ ಆಕಾರ ಸಂಬಂಧಕ್ಕೆ ಪತಿ ಆತ್ಮಹತ್ಯೆ ಮಾಡಿಕೂಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಗ್ರಾಮಾಂತರ ಠಾಣಾ ಪೋಲೀಸರು ಯುವಕನೊಂದಿಗೆ ಅಕ್ರಮ ಸಂಬಂಧ ಹೂಂದಿದ ಆತನ ಪತ್ನಿಯನ್ನು ಬಂಧಿಸಿದ್ದಾರೆ
ಗ್ರಾಮದ ನಿವಾಸಿ ಕೆಂಪಲಿಗೇಗೌಡ (51) ಅತ್ಮಹತ್ಯೆ ಮಾಡಿಕೂಂಡ ಪತಿ. ಈತನ ಪತ್ನಿ ರಾಜೇಶ್ವರಿ ಬಂಧಿತೆ. ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗ್ರಾಮದ ಯುವಕ ಲಿಂಗರಾಜು ತಲೆ ಮರೆಸಿ ಕೂಂಡಿದ್ದು ಈತನ ಬಂಧನಕ್ಕೆ ಪೋಲೀಸರು ಬಲೆಬೀಸಿದ್ದಾರೆ
ಘಟನೆ : ಮೃತ ಕೆಂಪೆಲಿಂಗೇಗೌಡ ಬಂಧಿತ ಅರೋಪಿ ರಾಜೇಶ್ವರಿಗೆ ರವಿ ಮತ್ತು ರಘು ಇಬ್ಬರು ಪುತ್ರರಿದ್ದು ಎಲ್ಲರು ಒಟ್ಟಿಗೆ ಸುಖ ಜೀವನ ನಡೆಸುತ್ತಿದ್ದರು, ಈ ನಡುವೆ ರಾಜೇಶ್ವರಿಗೆ ಪರಪುರುಷನ ತೆಕ್ಕೆ ಬೇಕೆನಿಸಿತ್ತು, ಗ್ರಾಮದ ಅನ್ಯ ಜನಾಂಗದ ಯುವಕ ಲಿಂಗರಾಜು ಎಂಬಾತನೂಂದಿಗೆ ಬಹಿರಂಗವಾಗಿಯೇ ಅಕ್ರಮ ಸಂಬಂಧವಿರಿಸಿಕೂಂಡಿದ್ದಳು.
ಈ ವಿಚಾರದಲ್ಲಿ ಕೆಲ ದಿನಗಳಿಂದ ಮನೆಯಲ್ಲಿ ಪತಿ ಮತ್ತು ಪತ್ನಿ ನಡುವೆ ಮನಸ್ತಾಪ ಎದುರಾಗಿತ್ತು. ಅದರೆ ಪತ್ನಿ ರಾಜೇಶ್ವರಿ ಅಕ್ರಮ ಸಂಬಂಧವನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಹಿನ್ನೆಲೆ ಮಾ 23 ರಂದು ಸಂಜೆ ಪತಿ ಕೆಂಪಲಿಂಗೇಗೌಡ ಮನನೂಂದು ತಮ್ಮಹಳೇ ಮನೆಯ ಛಾವಣಿಗೆ ನೇಣು ಬಿಗಿದಿಕೊಂಡು ಅತ್ಮಹತ್ಯೆ ಮಾಡಿಕೂಂಡರು ಎಂದು ಪೋಲಿಸರು ತಿಳಿಸಿದ್ದಾರೆ
ಪುತ್ರ ರವಿ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿ ತನ್ನ ತಂದೆ ಅತ್ಮಹತ್ಯೆಗೆ ನನ್ನ ತಾಯಿ ಹಾಗು ಅಕೆಯ ಪ್ರಿಯಕರ ಕಾರಣ ಎಂದು ಆರೋಪಿಸಿ ದೂರು ದಾಖಲಿಸಿದ್ದರು, ದೂರು ದಾಖಲಿಸಿಕೂಂಡ ಪಿ ಎಸ್ ಐ ವಿ ಸಿ ವನರಾಜು, ರಾಜೇಶ್ವರಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,
ಇನ್ನು ಇದಕ್ಕೆಲ್ಲಾ ಮೂಲ ಕಾರಣನಾದ ರಾಜೇಶ್ವರಿಯ ಪ್ರಿಯಕರ ತಲೆ ಮರೆಸಿಕೊಂಡಿದ್ದು ಬಂಧನಕ್ಕಾಗಿ ಪೋಲೀಸರು ಬಲೆಬಿಸಿದ್ದಾರೆ.
Web Title : ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ – Husband Commits Suicide For Wife’s Illegal Relationship
Follow us On
Google News |