Welcome To Kannada News Today

ನಿರ್ಗತಿಕರಿಗೆ ಆಹಾರ ವಿತರಿಸಿದ ಯುವಕನ ಮೇಲೆ ಪೊಲೀಸರಿಂದ ಹಲ್ಲೆ

Hyderabad cops assault man for distributing food to needy

🌐 Kannada News :

ಹೈದರಾಬಾದ್ : ಜುನೈದ್ ತನ್ನ ಸಹೋದರನೊಂದಿಗೆ ಶೈಕ್‌ಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಡವರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದ. ಅವರು ಮಂಗಳವಾರ ಆಹಾರವನ್ನು ವಿತರಿಸಲು ತೆರಳುತ್ತಿದ್ದಾಗ ಪೊಲೀಸರು ಅವರ ವಾಹನವನ್ನು ಚೆಕ್ ಪೋಸ್ಟ್ನಲ್ಲಿ ನಿಲ್ಲಿಸಿದ್ದಾರೆ, ಅಲ್ಲಿ ಈತ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ.

ವಾದವು ತಾರಕಕ್ಕೇರಿ, ಪೊಲೀಸ್ ಸಿಬ್ಬಂದಿ ಜುನೈದ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ನಂತರ ಪೊಲೀಸರು ಅವರನ್ನು ಸ್ಥಳದಿಂದ ಹೊರತು ಹೋಗುವಂತೆ ಒತ್ತಾಯಿಸಿದ್ದಾರೆ, ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ. 

ನಂತರ ಅವರು ಆಲಿವ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೋರಿದಾಗ, ಪೊಲೀಸರು ಅವರನ್ನು ಥಳಿಸಿದ ಕಾರಣ ಆಸ್ಪತ್ರೆ ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದೆ. ಬಹಳ ಸಮಯದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯಲಾಗುತ್ತಿದೆ.

ಹಲ್ಲೆಯಿಂದ ಯುವಕನಿಗೆ ಬಾರಿ ಪೆಟ್ಟಾಗಿದ್ದು 11 ಹೊಲಿಗೆಗಳನ್ನು ಹಾಕಲಾಗಿದೆ, ರಕ್ತಸ್ರಾವಕ್ಕೆ ಒಳಗಾದ ಯುವಕನ ಚಿತ್ರಗಳು ವೈರಲ್ ಆಗುತ್ತಿದ್ದಂತೆ, ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಘಟನೆಯಲ್ಲಿ ಭಾಗಿಯಾಗಿದ್ದ ಗೃಹರಕ್ಷಕ ಹನುಮಂತು ಅವರನ್ನು ಅಮಾನತುಗೊಳಿಸುವಂತೆ ಹೈದರಾಬಾದ್ ಪೊಲೀಸ್ ಆಯುಕ್ತ ಅಜಾನಿ ಕುಮಾರ್ ಆದೇಶ ಹೊರಡಿಸಿದ್ದಾರೆ..

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.