Bridge Stolen In Bihar : ಬಿಹಾರದಲ್ಲಿ ವಿಚಿತ್ರ ಕಳ್ಳತನ, ಸೇತುವೆಯನ್ನೇ ಕದ್ದೊಯ್ದ ಕಳ್ಳರು
Bridge Stolen In Bihar : ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ವಿಚಿತ್ರ ಕಳ್ಳತನ ನಡೆದಿದೆ. 60 ಅಡಿ ಕಬ್ಬಿಣ ಸೇತುವೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಹಾಯದಿಂದಲೇ ಕಳ್ಳರು ಸೇತುವೆಯನ್ನು ಕದ್ದಿದ್ದಾರೆ.
ಬಿಹಾರ: ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ವಿಚಿತ್ರ ಕಳ್ಳತನ ನಡೆದಿದೆ. 60 ಅಡಿ ಕಬ್ಬಿಣ ಸೇತುವೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಹಾಯದಿಂದಲೇ ಕಳ್ಳರು ಸೇತುವೆಯನ್ನು ಕದ್ದಿದ್ದಾರೆ.
ಮೂರು ದಿನದಲ್ಲಿ ಗ್ಯಾಸ್ ಕಟ್ಟರ್ ಮತ್ತು ಅರ್ಥ್ ಮೂವರ್ ಯಂತ್ರಗಳನ್ನು ಬಳಸಿ ಇಡೀ ಸೇತುವೆಯನ್ನು ಕೆಡವಲಾಯಿತು ಎಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸೇತುವೆಯನ್ನು ತೆಗೆಯಲು ಸ್ಥಳೀಯ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರ ಕೋರಿರುವುದು ಕುತೂಹಲ ಮೂಡಿಸಿದೆ. ಕಬ್ಬಿಣವನ್ನು ಭಾರೀ ಪ್ರಮಾಣದಲ್ಲಿ ದೋಚಿದ್ದ ದರೋಡೆಕೋರರು ಪರಾರಿಯಾಗಿರುವುದು ಅಧಿಕಾರಿಗಳಿಗೆ ಅರಿವಿಗೆ ಬಂದಿದ್ದು ಬಹಳ ಸಮಯದ ನಂತರ.
ಅಮಿಯಾವರ್ ಗ್ರಾಮದ ನಸ್ರಿಗಂಜ್ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಅರ್ರಾ ಕಾಲುವೆಯ ಮೇಲೆ 1972 ರಲ್ಲಿ ಸೇತುವೆಯನ್ನು ನಿರ್ಮಿಸಲಾಯಿತು. ಸೇತುವೆ ಸಂಪೂರ್ಣ ಹಳೆಯದಾಗಿದ್ದು, ಶಿಥಿಲಗೊಂಡಿದೆ. ಇದರಿಂದ ಭಯಗೊಂಡ ಸ್ಥಳೀಯ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಳಸುವುದನ್ನು ನಿಲ್ಲಿಸಿದ್ದಾರೆ. ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿದ ಸೇತುವೆಯನ್ನು ಬಳಸಿಕೊಳ್ಳಲು ಆರಂಭಿಸಿದರು.
ನೀರಾವರಿ ಇಲಾಖೆ ಅಧಿಕಾರಿಗಳಿಂದ ದೂರು ಸ್ವೀಕರಿಸಲಾಗಿದೆ ಎಂದು ನಸ್ರಿಗಂಜ್ ಎಸ್ಎಚ್ಒ ಸುಭಾಷ್ ಕುಮಾರ್ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಕಳ್ಳರನ್ನು ಗುರುತಿಸಲು ಸ್ಕೆಚ್ಗಳನ್ನು ತಯಾರಿಸುತ್ತಿದ್ದು, ಸ್ಕ್ರ್ಯಾಪ್ ವಸ್ತುಗಳನ್ನು ಮಾರಾಟ ಮಾಡುವವರೊಂದಿಗೆ ಅವರು ಸಂಪರ್ಕದಲ್ಲಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Iron Bridge Stolen In Bihar Rohtas District
Follow Us on : Google News | Facebook | Twitter | YouTube