ಗುಜರಾತ್ ನಲ್ಲಿ 600 ಕೋಟಿ ಮೌಲ್ಯದ ಹೆರಾಯಿನ್ ವಶ

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಿಂಜುಡಾ ಗ್ರಾಮದಿಂದ ಕೋಟಿ ಮೌಲ್ಯದ 100 ಕೆಜಿಗೂ ಅಧಿಕ ಹೆರಾಯಿನ್ ವಶಪಡಿಸಿಕೊಂಡಿದೆ.

Bengaluru, Karnataka, India
Edited By: Satish Raj Goravigere
  • ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಿಂಜುಡಾ ಗ್ರಾಮದಿಂದ ಕೋಟಿ ಮೌಲ್ಯದ 100 ಕೆಜಿಗೂ ಅಧಿಕ ಹೆರಾಯಿನ್ ವಶಪಡಿಸಿಕೊಂಡಿದೆ.

ಅಹಮದಾಬಾದ್: ಗುಜರಾತ್ ನ ದ್ವಾರಕಾ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಮೊರ್ಬಿ ಜಿಲ್ಲೆ ಜಿಂಜುಡಾಲೊ ಬಳಿ 120 ಕೆಜಿ ಹೆರಾಯಿನ್ ಅನ್ನು, ಗುಜರಾತ್‌ನ ಭಯೋತ್ಪಾದನಾ ಗ್ರಹ ದಳ (ಎಟಿಎಸ್) ವಶಪಡಿಸಿಕೊಂಡಿದೆ.

ಅವುಗಳ ಮೌಲ್ಯ ಸುಮಾರು 600 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಡ್ರಗ್ಸ್ ಗ್ಯಾಂಗ್ ನ ನಾಲ್ವರನ್ನು ಬಂಧಿಸಲಾಗಿದೆ. ಸ್ಥಳೀಯ ಪೊಲೀಸರೊಂದಿಗೆ ಎಟಿಎಸ್ ನಡೆಸಿದ ಕಾರ್ಯಾಚರಣೆಯಲ್ಲಿ ಕಚ್ ಕೊಲ್ಲಿಯಲ್ಲಿರುವ ನವಲಾಖಿ ಬಂದರಿನ ಬಳಿ ಇರುವ ಜಿಂಜುಡಾ ಗ್ರಾಮದಲ್ಲಿ ಮೂವರನ್ನು ಬಂಧಿಸಲಾಗಿದೆ.

ಗುಜರಾತ್ ನಲ್ಲಿ 600 ಕೋಟಿ ಮೌಲ್ಯದ ಹೆರಾಯಿನ್ ವಶ - Kannada News

“ಗುಜರಾತ್ ಪೊಲೀಸರ ಮತ್ತೊಂದು ಸಾಧನೆ. ಗುಜರಾತ್ ಪೊಲೀಸರು ಡ್ರಗ್ಸ್ ನಿರ್ಮೂಲನೆಗೆ ಮುಂಚೂಣಿಯಲ್ಲಿದೆ. ಗುಜರಾತ್ ಎಟಿಎಸ್ ಸುಮಾರು 120 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ” ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಡಿಆರ್‌ಐ ಅಧಿಕಾರಿಗಳು ಕಚ್‌ನ ಮುಂದ್ರಾ ಬಂದರಿನಲ್ಲಿ 3,000 ಕೆಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದರು. ಇದರ ಮೌಲ್ಯ 21,000 ಕೋಟಿ ರೂ.

ವಶಪಡಿಸಿಕೊಂಡ ಹೆರಾಯಿನ್ ಅನ್ನು ಕಂದಹಾರ್ ಮೂಲದ ಹಸನ್ ಹುಸೇನ್ ಲಿಮಿಟೆಡ್ ರಫ್ತು ಮಾಡಿತ್ತು ಮತ್ತು ವಿಜಯವಾಡ ಮೂಲದ ಆಶಿ ಟ್ರೇಡಿಂಗ್ ಕಂಪನಿಯು ಇರಾನ್‌ನ ಬಂದರ್ ಅಬ್ಬಾಸ್ ಪೋರ್ಟ್ ಮೂಲಕ ಗುಜರಾತ್‌ನ ಮುಂದ್ರಾ ಬಂದರಿಗೆ ಆಮದು ಮಾಡಿಕೊಂಡಿದೆ.

ಈ ಪ್ರಕರಣದಲ್ಲಿ ಚೆನ್ನೈ ಮೂಲದ ದಂಪತಿಗಳಾದ ಮಾಚವರಂ ಸುಧಾಕರನ್ ಮತ್ತು ದುರ್ಗಾ ಪಿವಿ ಗೋವಿಂದರಾಜು ಅವರನ್ನು ಸಹ ಡಿಆರ್‌ಐ ಬಂಧಿಸಿದ್ದು, ಅದು ಈಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ದಲ್ಲಿದೆ.