ಗೆಳೆಯನೊಂದಿಗೆ ಓಡಿಹೋಗಿದ್ದ ಯುವತಿಗೆ ಮಸಿ ಬಳೆದು.. ತಲೆ ಬೋಳಿಸಿದ ಗ್ರಾಮಸ್ಥರು

ಬಾಲಕಿ ಓಡಿಹೋದ ವ್ಯಕ್ತಿಯ ವಿರುದ್ಧ ಅತ್ಯಾಚಾರ ಮತ್ತು ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

🌐 Kannada News :
  • ಬಾಲಕಿ ಓಡಿಹೋದ ವ್ಯಕ್ತಿಯ ವಿರುದ್ಧ ಅತ್ಯಾಚಾರ ಮತ್ತು ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಗುಜರಾತ್‌ನ ಪಟಾನ್ ಜಿಲ್ಲೆಯ ಹರಿಜ್ ಗ್ರಾಮದಲ್ಲಿ ಅಪ್ರಾಪ್ತ ವಯಸ್ಕ ಯುವತಿಯನ್ನು ಗ್ರಾಮಸ್ಥರು ತಾಲಿಬಾನ್‌ನಂತೆ ನಡೆಸಿಕೊಂಡರು. ಗ್ರಾಮಸ್ಥರು ಮೊದಲು ಯುವತಿಯ ಮುಖಕ್ಕೆ ಮಸಿ ಬಳೆದು, ನಂತರ ತಲೆ ಬೋಳಿಸಿದರು.

ಇದಾದ ನಂತರ ಆಕೆಯ ತಲೆಯ ಮೇಲೆ ಬೆಂಕಿ ಕೆಂಡ ತುಂಬಿದ್ದ ಮಡಕೆ ಇಟ್ಟು ಊರಲ್ಲಿ ಮೆರವಣಿಗೆ ಮಾಡಲಾಯಿತು, 14 ವರ್ಷದ ಬಾಲಕಿ ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಲಾಗಿದೆ.

ಕಳೆದ ಮಂಗಳವಾರ (ನ.9) ಈ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು 35 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈವರೆಗೆ 22 ಮಂದಿಯನ್ನು ಬಂಧಿಸಲಾಗಿದೆ.

ಪೊಲೀಸ್ ಅಧೀಕ್ಷಕ (ಪಟಾನ್) ಅಕ್ಷಯರಾಜ್ ಮಕ್ವಾನಾ ಮಾತನಾಡಿ, ವಾಡಿ ಬುಡಕಟ್ಟಿನ ಜನರು ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಕ್ಕಾಗಿ ಬಾಲಕಿಯನ್ನು ಶಿಕ್ಷಿಸಿ ತಲೆ ಬೋಳಿಸಿದ್ದಾರೆ. ಮುಖದಲ್ಲಿ ಮಸಿ ಬಳೆದಿದ್ದಾರೆ. ನಂತರ ಅವರ ತಲೆಯ ಮೇಲೆ ಬೆಂಕಿಯ ಕೆಂಡ ತುಂಬಿದ ಮಡಕೆಯನ್ನು ಇಟ್ಟು ಗ್ರಾಮದಲ್ಲಿ ಸುತ್ತಿಸಲಾಯಿತು. ವಾಡಿ ಬುಡಕಟ್ಟಿನ ಜನರು ಹುಡುಗಿ ತನ್ನ ಕಾರ್ಯಗಳಿಂದ ತಮ್ಮ ಬುಡಕಟ್ಟಿಗೆ ಮಾನಹಾನಿ ಮಾಡಿದ್ದಾಳೆ ಎಂದು ಹೇಳಿಕೊಳ್ಳುತ್ತಾರೆ… ಎಂದು ವಿವರಿಸಿದರು.

ಪ್ರೇಮಿಯ ವಿರುದ್ಧ ಅತ್ಯಾಚಾರ ಪ್ರಕರಣ

ಬಾಲಕಿ ಓಡಿಹೋದ ವ್ಯಕ್ತಿಯ ವಿರುದ್ಧ ಅತ್ಯಾಚಾರ ಮತ್ತು ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಅದರಲ್ಲಿ, ಈ ವ್ಯಕ್ತಿಯು ಹುಡುಗಿಯನ್ನು ಅಪಹರಿಸಿ, ಖೇಡಾ ಜಿಲ್ಲೆಯ ಡಾಕೋರ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಪೊಲೀಸರ ಪ್ರಕಾರ, ಶುಕ್ರವಾರ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಗಳ ಮೇಲೆ ಐಪಿಸಿ, ಬಾಲಾಪರಾಧಿ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನು ವಿಧಿಸಲಾಗಿದೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today