ರಜೆ ನೀಡದಿದ್ದಕ್ಕೆ ಹಿರಿಯ ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಸೈನಿಕ

ರಜೆ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಹಿರಿಯ ಸಹೋದ್ಯೋಗಿಗಳನ್ನು ಯೋಧನೊಬ್ಬ ಗುಂಡಿಕ್ಕಿ ಕೊಂದಿದ್ದಾನೆ. ತ್ರಿಪುರಾ ರಾಜ್ಯದ ಸೆಪಹಿಜಾಲಾ ಜಿಲ್ಲೆಯ ಕೊನಾಬಾಂಜ್ ಪ್ರದೇಶದಲ್ಲಿನ ಒಳನುಸುಳುವಿಕೆ ವಿರೋಧಿ ಶಿಬಿರದಲ್ಲಿ ಶನಿವಾರ ಈ ಘಟನೆ ನಡೆದಿದೆ.

ಅಗರ್ತಲಾ : ರಜೆ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಹಿರಿಯ ಸಹೋದ್ಯೋಗಿಗಳನ್ನು ಯೋಧನೊಬ್ಬ ಗುಂಡಿಕ್ಕಿ ಕೊಂದಿದ್ದಾನೆ. ತ್ರಿಪುರಾ ರಾಜ್ಯದ ಸೆಪಹಿಜಾಲಾ ಜಿಲ್ಲೆಯ ಕೊನಾಬಾಂಜ್ ಪ್ರದೇಶದಲ್ಲಿನ ಒಳನುಸುಳುವಿಕೆ ವಿರೋಧಿ ಶಿಬಿರದಲ್ಲಿ ಶನಿವಾರ ಈ ಘಟನೆ ನಡೆದಿದೆ.

ಆರೋಪಿ ಸುಕಾಂತ ದಾಸ್ (38) ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್) ನಲ್ಲಿ ಯೋಧ. ಅವರ ತಂದೆ ತಾಯಿಗೆ ಆರೋಗ್ಯ ಸರಿಯಿಲ್ಲ, ಅವರನ್ನು ಭೇಟಿ ಮಾಡಲು ರಜೆ ನೀಡಬೇಕು ಎಂದು ಹಿರಿಯ ಸಹೋದ್ಯೋಗಿಗಳಾದ ಸುಬೇದಾರ್ ಮಾರ್ಕ ಸಿಂಗ್ ಮತ್ತು ನಾಯಕ್ ಸುಬೇದಾರ್ ಕಿರಣ್ ಕುಮಾರ್ ಅವರಿಗೆ ಮನವಿ ಮಾಡಿದರು.

ಆದಾಗ್ಯೂ, ಅವರು ದಾಸ್ ಅವರ ಮನವಿಯನ್ನು ತಿರಸ್ಕರಿಸಿದರು. ಇದರಿಂದ ತೀವ್ರ ನಿರಾಸೆಗೊಂಡ ದಾಸ್ ಶನಿವಾರ ಬೆಳಗ್ಗೆ ಶಿಬಿರದೊಳಗೆ ತನ್ನ ಸರ್ವಿಸ್ ರೈಫಲ್‌ನಿಂದ ಇಬ್ಬರಿಗೆ ಗುಂಡು ಹಾರಿಸಿದ್ದಾನೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳಿಗೆ ಶರಣಾಗಿದ್ದಾನೆ.

ಘಟನೆಯ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಿಮಂತ ವಿಶ್ವ ಶರ್ಮಾ ಆಘಾತ ವ್ಯಕ್ತಪಡಿಸಿದ್ದಾರೆ. ಕರ್ತವ್ಯದ ವೇಳೆ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today