Crime News, ತನ್ನ ಮೂರು ಹೆಣ್ಣು ಮಕ್ಕಳ ಕೊಂದ ತಂದೆಗೆ ಮರಣದಂಡನೆ ಶಿಕ್ಷೆ

ತನ್ನ 3 ಹೆಣ್ಣು ಮಕ್ಕಳ ಕೊಂದ ತಂದೆಗೆ ನ್ಯಾಯಾಲಯ ಒಂದು ಲಕ್ಷ ದಂಡ ವಿಧಿಸಿ ಮರಣದಂಡನೆ ಶಿಕ್ಷೆ ವಿಧಿಸಿದೆ. ಮೂರು ವರ್ಷಗಳ ಹಿಂದೆ ಪತ್ನಿ ತವರು ಮನೆಯಿಂದ ಬರದ ಕಾರಣ ಕೋಪಗೊಂಡ ಪತಿ ಮೂರು ಹೆಣ್ಣು ಮಕ್ಕಳನ್ನು ಕೊಂದಿದ್ದ...

ತನ್ನ 3 ಹೆಣ್ಣು ಮಕ್ಕಳ ಕೊಂದ ತಂದೆಗೆ ನ್ಯಾಯಾಲಯ ಒಂದು ಲಕ್ಷ ದಂಡ ವಿಧಿಸಿ ಮರಣದಂಡನೆ ಶಿಕ್ಷೆ ವಿಧಿಸಿದೆ. ಮೂರು ವರ್ಷಗಳ ಹಿಂದೆ ಪತ್ನಿ ತವರು ಮನೆಯಿಂದ ಬರದ ಕಾರಣ ಕೋಪಗೊಂಡ ಪತಿ ತನ್ನ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದ ಮತ್ತು ಮೃತ ದೇಹಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.

ಪ್ರಕರಣದ ಶಿಕ್ಷೆಯನ್ನು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಧೀಶರು, ಈ ಘೋರ ಅಪರಾಧವು ಕ್ಷಮಾರ್ಹವಲ್ಲ ಮತ್ತು ಅಮಾನವೀಯ ಕೃತ್ಯವಾಗಿದೆ ಎಂದು ಹೇಳಿದರು.

ಮೂರು ವರ್ಷಗಳ ಹಿಂದೆ ಪಾಪಿ ತಂದೆ ಆಲ್ಕೋಹಾಲ್ ಸೇವನೆಯಿಂದ ತನ್ನ ಮೂರು ಹೆಣ್ಣು ಮಕ್ಕಳನ್ನು ಕೊಂದ, ಕಾರಣ ತನ್ನ ಪತ್ನಿ ತವರಿನಿಂದ ಬರಲಿಲ್ಲ ಎಂಬ ಕೋಪಕ್ಕೆ ಅಪ್ರಾಪ್ತ ಮಕ್ಕಳನ್ನೇ ಸುತ್ತಿಗೆಯಿಂದ ಹೊಡೆದು ಕೊಂದಿದ್ದ… , ನಂತರ ಪೆಟ್ರೋಲ್ ಸುರಿದು ದೇಹಗಳನ್ನು ಸುಟ್ಟಿದ್ದ… ಗ್ರಾಮಸ್ಥರ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದರು.

Crime News, ತನ್ನ ಮೂರು ಹೆಣ್ಣು ಮಕ್ಕಳ ಕೊಂದ ತಂದೆಗೆ ಮರಣದಂಡನೆ ಶಿಕ್ಷೆ - Kannada News

ಮನೆಯಲ್ಲಿ ಮಲಗಿದ್ದ 12 ವರ್ಷದ ಅಂಜಲಿ, 7 ವರ್ಷದ ರಾಧಿಕಾ ಹಾಗೂ 4 ವರ್ಷದ ವಿಶಾಖಾ ಎಂಬುವರನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಸಾಕ್ಷ್ಯ ನಾಶಪಡಿಸಲು ಮೂವರ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ

ಮನೆಯಲ್ಲಿ ಹೊಗೆ ಎದ್ದಿದ್ದನ್ನು ನೋಡಿದ ಗ್ರಾಮಸ್ಥರು ಅವರ ಮನೆಗೆ ಆಗಮಿಸಿದರು. ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲಿ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದರು. ಮೂರನೇ ಮಗಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

Follow us On

FaceBook Google News