Crime News: ನರ್ಸ್ ನಿರ್ಲಕ್ಷ್ಯ, ಕೈಯಿಂದ ನವಜಾತ ಶಿಶು ಜಾರಿ ಬಿದ್ದು ಸಾವು

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಈ ಧಾರುಣ ಘಟನೆ ನಡೆದಿದೆ. ನರ್ಸ್ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ. ನವಜಾತ ಶಿಶು ನರ್ಸ್ ಕೈಯಿಂದ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಲಕ್ನೋದ ಚಿನ್ಹಾಟ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಈ ಧಾರುಣ ಘಟನೆ ನಡೆದಿದೆ. ನರ್ಸ್ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ. ನವಜಾತ ಶಿಶು ನರ್ಸ್ ಕೈಯಿಂದ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಲಕ್ನೋದ ಚಿನ್ಹಾಟ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.

ಈ ಪ್ರದೇಶದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು… ಈ ಸಮಯದಲ್ಲಿ ನರ್ಸ್ ಮಗುವನ್ನು ಟವೆಲ್ ಸಹಾಯವಿಲ್ಲದೆ ಒಂದು ಕೈಯಿಂದ ಎತ್ತಿದ್ದಾಳೆ. ಈ ಕ್ರಮದಲ್ಲಿ ಮಗು ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದೆ.

ಇದನ್ನು ಸ್ವತಃ ನೋಡಿದ ತಾಯಿ ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಈ ವೇಳೆ ಗಾಬರಿಗೊಂಡ ಕುಟುಂಬಸ್ಥರು ಹೆರಿಗೆ ಕೊಠಡಿಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಆದರೆ, ಅವರನ್ನು ಆಸ್ಪತ್ರೆ ಸಿಬ್ಬಂದಿ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಅವರೆಲ್ಲ ಸಿಬ್ಬಂದಿ ಮೇಲೆ ಹರಿಹಾಯ್ದು ಒಳಗೆ ಹೋಗಿ ನೋಡಿದಾಗ ಘಟನೆ ನೋಡಿ ಶಾಕ್ ಆಗಿದ್ದಾರೆ.

Crime News: ನರ್ಸ್ ನಿರ್ಲಕ್ಷ್ಯ, ಕೈಯಿಂದ ನವಜಾತ ಶಿಶು ಜಾರಿ ಬಿದ್ದು ಸಾವು - Kannada News

ಈ ಹಂತದಲ್ಲಿ ಆಸ್ಪತ್ರೆ ಸಿಬ್ಬಂದಿ ಮಹಿಳೆ ಸತ್ತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ನೋಂದಣಿ ಮಾಡಲು ಯತ್ನಿಸಿದರು. ಮಗು ಆರೋಗ್ಯವಾಗಿ ಜನಿಸಿದ್ದು, ನರ್ಸ್ ಒಂದು ಕೈಯಿಂದ ಎತ್ತಿದಾಗ ಬಿದ್ದು ಸಾವನ್ನಪ್ಪಿದೆ ಎಂದು ತಾಯಿ ಹೇಳಿದ್ದಾರೆ. ಈ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ತಕ್ಷಣ ಪೊಲೀಸರು ಆಸ್ಪತ್ರೆಗೆ ತೆರಳಿ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ತಲೆಗೆ ಪೆಟ್ಟಾಗಿ ಮಗು ಸಾವನ್ನಪ್ಪಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Newborn dies after slipping from nurse’s arms at private hospital Lucknow Uttar Pradesh

Related Stories