Crime News, ಬೆಳ್ಳಿ ಗೆಜ್ಜೆಗಾಗಿ ಕಾಲುಗಳನ್ನು ಕತ್ತರಿಸಿದ ಕಳ್ಳರು !
ಜೈಪುರ : ಬೆಲೆಬಾಳುವ ಚಿನ್ನಾಭರಣ, ಹಣವನ್ನು ಕಳ್ಳರು ದೋಚುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇಲ್ಲೊಂದು ಭಯಾನಕ ಘಟನೆಯಲ್ಲಿ ಕಳ್ಳರು ಬೆಳ್ಳಿ ಗೆಜ್ಜೆ ಗಾಗಿ ಮಹಿಳೆಯ ಕಾಲು ಕತ್ತರಿಸಿ ಹಾಕಿದ್ದಾರೆ. ಈ ಘಟನೆ ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯ ಚರಭುಜ ಪೊಲೀಸ್ ಠಾಣೆ ಬಳಿ ಸೋಮವಾರ ತಡರಾತ್ರಿ ಬೆಳಕಿಗೆ ಬಂದಿದೆ.
45 ವರ್ಷದ ಕಂಕುಭಾಯಿ ಎಂಬ ಮಹಿಳೆ ಸೋಮವಾರ ಬೆಳಗ್ಗೆ ಪತಿಗೆ ಟಿಫಿನ್ ನೀಡಲು ಜಮೀನಿಗೆ ತೆರಳಿದ್ದರು. ಆದರೆ ದಾರಿಯಲ್ಲಿ ಆಕೆಯನ್ನು ಕಳ್ಳರು ಅಪಹರಿಸಿದ್ದಾರೆ. ಮಧ್ಯಾಹ್ನವಾದರೂ ಕಂಕುಭಾಯಿ ಬರದೇ ಇದ್ದದ್ದನ್ನು ಕಂಡ ಗಂಡ ಮನೆಗೆ ಬಂದ. ಅಮ್ಮ ಎಲ್ಲಿ? ಎಂದು ಮಕ್ಕಳನ್ನು ವಿಚಾರಿಸಿದಾಗ ..ಬೆಳಗ್ಗೆ ಟಿಫಿನ್ ತೆಗೆದುಕೊಂಡು ಜಮೀನಿಗೆ ಬಂದಿರುವುದಾಗಿ ತಿಳಿಸಿದರು.
ಆದರೆ ಆಕೆ ಜಮೀನಿಗೆ ಹೋಗದೇ ಇದ್ದಾಗ.. ಕುಟುಂಬಸ್ಥರು ಹಾಗೂ ಸಂಬಂಧಿಕರು ಆಕೆಯನ್ನು ಹುಡುಕಾಡಿದರು.. ಸೋಮವಾರ ರಾತ್ರಿಯವರೆಗೂ ಆಕೆ ಪತ್ತೆಯಾಗಿರಲಿಲ್ಲ. ಕಂಕುಭಾಯಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ನಡುವೆ ಬುಧವಾರ ಬೆಳಗ್ಗೆ ಕಂಕುಭಾಯಿ ಶವವನ್ನು ಗುರುತಿಸಲಾಗಿದೆ, ಚರಭುಜ ಪೊಲೀಸ್ ಠಾಣೆಯ ಹೊರವಲಯದಲ್ಲಿರುವ ಜಮೀನಿನಲ್ಲಿ ಪೊಲೀಸರು ಕಂಕುಭಾಯ್ ಅವರ ಶವವನ್ನು ಪತ್ತೆ ಮಾಡಿದರು. ಆಕೆಯ ಕಾಲುಗಳನ್ನು ಕತ್ತರಿಸಿರುವುದು ಪತ್ತೆಯಾಗಿದೆ. ಕತ್ತಿನ ಮೇಲೆ ದಾಳಿ ಮಾಡಿ ಆಕೆಯನ್ನು ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆಕೋರರು ಬೆಳ್ಳಿಯ ಗೆಜ್ಜೆಗಳಿಗಾಗಿ ಆಕೆಯ ಕಾಲುಗಳನ್ನು ಕತ್ತರಿಸಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.